ಸುಳ್ಯ: ನವೆಂಬರ್ 10 ಹಾಗೂ 11 ರಂದು ಶಾಲಾ ಶಿಕ್ಷಣ ಇಲಾಖೆ ಹಾಗೂ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ನಾಗಮಂಗಲ, ಮಂಡ್ಯದ ಆಶ್ರಯದಲ್ಲಿ ನಡೆದ 14ರ ವಯೋಮಾನದ ಯೋಗ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬಾಲಕಿಯರ ವಿಭಾಗದಲ್ಲಿ ಆರ್ಟಿಸ್ಟಿಕ್ ವೈಯಕ್ತಿಕ ವಿಭಾಗದಲ್ಲಿ ಹಾರ್ದಿಕ ಕೆ. ಕೆ 7ನೇ ಪ್ರಥಮ, ಟ್ರೆಡಿಶನಲ್ ವಿಭಾಗ ಸೋನಾ ಅಡ್ಕಾರ್ 7ನೇ ಪ್ರಥಮ, ಆರ್ಟಿಸ್ಟಿಕ್ ಡಬಲ್ಸ್ ಹಾಗೂ ತಾಳಬದ್ದ ಡಬಲ್ಸ್ ವಿಭಾಗದಲ್ಲಿ ಹಾರ್ದಿಕ 7 ನೇ ಹಾಗೂ ಸೋನಾ ಅಡ್ಕಾರ್ 7 ನೇ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಪ್ರಥಮ ಸ್ಥಾನವನ್ನು ಪಡೆದಂತಹ ಹಾರ್ದಿಕ ಕೆ. ಕೆ 7 ನೇ ತರಗತಿ ಇವರು ಸುಳ್ಯ ತಾಲೂಕು ಆಫೀಸ್ ಉದ್ಯೋಗಿ ಕೃಷ್ಣಪ್ಪ ಗೌಡ ಕುರುಂಜಿಬಾಗ್ ಮತ್ತು ಪುಷ್ಪಾವತಿ ದಂಪತಿಗಳ ಪುತ್ರಿ. ಸೋನಾ ಅಡ್ಕರ್ ಇವರು ಅಡ್ಕಾರಿನ ಕೃಷಿಕ ಹಾಗೂ ಉದ್ಯಮಿ ಶರತ್ ಅಡ್ಕಾರ್ ಹಾಗೂ ಶೋಭಾ ದಂಪತಿಗಳ ಪುತ್ರಿ.
ವಿದ್ಯಾಸಂಸ್ಥೆಯ ಜೊತೆ ಕಾರ್ಯದರ್ಶಿ ಓಲ್ವಿನ್ ಎಡ್ವರ್ಡ್ ಡಿ ಕುನ್ಹ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ಇವರ ಮಾರ್ಗದರ್ಶನದಲ್ಲಿ ಸಂತೋಷ್ ಮುಂಡಕಜೆ ಹಾಗೂ ಶ್ರೀಮತಿ ಪ್ರಶ್ವಿಜ ಯೋಗ ತರಬೇತು ನೀಡಿ , ದೈಹಿಕ ಶಿಕ್ಷಣ ಶಿಕ್ಷಕರಾದ ಪುಷ್ಪವೇಣಿ ಹುದೇರಿ, ಕೊರಗಪ್ಪ ಬೆಳ್ಳಾರೆ, ಸಹಶಿಕ್ಷಕಿ ಶೋಭಾ ಸಹಕರಿಸಿದರು.