ಉಳ್ಳಾಲ, 4 ಜುಲೈ 2025: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದಕ್ಷಿಣ ಕನ್ನಡ ಮಂಗಳೂರು ಹಾಗೂ ಉಳ್ಳಾಲ ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ಕ್ರೀಡಾ ಸಭೆಯು ಕೆ. ಪಾಂಡ್ಯರಾಜ್ ಬಲ್ಲಾಳ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಿತು.

ಈ ಸಭೆಯ ಮುಖ್ಯ ಅತಿಥಿಯಾಗಿ ಆಗಮಿಸಿದ ಉಳ್ಳಾಲ ತಾಲೂಕು ವಲಯ ಮಟ್ಟದ ಕ್ರೀಡಾ ಸಂಯೋಜಕರಾದ ಮೊಹಮ್ಮದ್ ಅಶ್ರಫ್ ರವರು ಉಳ್ಳಾಲ ತಾಲೂಕು ವಲಯಕ್ಕೆ ಸೇರಿದ ವಿವಿಧ ಕಾಲೇಜಿನ ಮುಖ್ಯಸ್ಥರೊಂದಿಗೆ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕರೊಂದಿಗೆ ಚರ್ಚಿಸಿ ಉಳ್ಳಾಲ ತಾಲೂಕು ಮಟ್ಟದ ಕ್ರೀಡೆಯು ಯಾವಾಗ, ಎಲ್ಲಿ, ಯಾರು ಅದನ್ನು ಆಯೋಜಿಸುವರು ಎಂಬುದನ್ನು ನಿರ್ಧರಿಸಿದರು.

ಈ ಸಭೆಯಲ್ಲಿ ಉಳ್ಳಾಲ ತಾಲೂಕಿನ ವಿವಿಧ ಕಾಲೇಜಿನ ಪ್ರಾಂಶುಪಾಲರುಗಳು ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕರು ಪಾಲ್ಗೊಂಡಿದ್ದರು. ವೇದಿಕೆಯ ಮೇಲೆ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಉಪ ಕಾರ್ಯದರ್ಶಿ ಹಾಗೂ ವಿಶ್ವಮಂಗಳ ಪದವಿ ಪೂರ್ವ ಕಾಲೇಜು, ಕೊಣಾಜೆಯ ಪ್ರಾಂಶುಪಾಲರಾದ ಶ್ರೀಮತಿ ಪೂರ್ಣಿಮಾ ರವರು ಮತ್ತು ಕೆ.ಪಾಂಡ್ಯರಾಜ್ ಬಲ್ಲಾಳ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶರ್ಮಿಳ ಮುಖೇಶ್ ರಾವ್, ಜೊತೆಗೆ ಉಪ ಪ್ರಾಂಶುಪಾಲೆ ಶ್ರೀಮತಿ ಕವಿತಾ ಎಂ ಶೆಟ್ಟಿ ಅವರು ಉಪಸ್ಥಿತರಿದ್ದರು. ಉಪನ್ಯಾಸಕಿಯಾದ ಅಶ್ವಿನಿ ಸಭೆಯನ್ನು ನಿರೂಪಿಸಿ ವಂದಿಸಿದರು.