ಮಂಗಳೂರು, 18 ಸೆಪ್ಟೆಂಬರ್ 2025: ಬಲ್ಲಾಳ್ ಭಾಗ್ ನ ಶ್ರೀದೇವಿ ಕಾಲೇಜಿನ ಫ್ಯಾಷನ್ ಡಿಸೈನಿಂಗ್ ವಿಭಾಗದ ವಿದ್ಯಾರ್ಥಿಗಳಿಂದ ಶ್ರೀ ಯಾನ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಭಾರತ ಮನಿ ವಾಣಿ ರಾಜಗೋಪಾಲ್ ಫೌಂಡರ್ ಪ್ರಿನ್ಸಿಪಾಲ್ ಆಫ್ ಸಂದೇಶ ಲಲಿತ ಕಲಾ ಕೇಂದ್ರ ಇವರು ತಮ್ಮ ಮನದ ಮಾತನ್ನು ವಿದ್ಯಾರ್ಥಿಗಳೂಂದಿಗೆ ಹಂಚುತ್ತ ಕಾರ್ಯಕ್ರಮವನ್ನು ಆಯೋಜಿಸಿದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಶ್ರಮವನ್ನು ಶ್ಲಾಘಿಸಿದರು. ಫ್ಯಾಷನ್ ಡಿಸೈನಿಂಗ್ ವಿಭಾಗದ ಪ್ರಾಂಶುಪಾಲೆ ಕಸ್ತೂರಿ ಜೆ ಶೆಟ್ಟಿ ಉಪಸ್ಥಿತರಿದ್ದು , ಈ ಕಾರ್ಯಕ್ರಮದ ಹಿಂದಿರುವ ನಿರ್ವಹಣೆ ಹಾಗೂ ವಿದ್ಯಾರ್ಥಿಗಳ ಶ್ರಮವನ್ನು ಶ್ಲಾಗಿಸಿದರು ಹಾಗು ಸಹ ಶಿಕ್ಷಕರಾದ ಪ್ರಭಾ ಶೆಟ್ಟಿ, ಸೌಜನ್ಯಾ ಆಚರ್ಯ,ಪ್ರಜ್ಞಾ ,ಮೈಥಿಲಿ ಸೋಮಯಾಜಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಝೈಮಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಪ್ರಧ ರಾವ್ ಸ್ವಾಗತಿಸಿ, ರಮ್ಯಾ ಇವರು ಆಚರಣೆಯ ವಿಶೇಷತೆಯನ್ನು ವಿವರಿಸುತ್ತ ಕೃಷ್ಣ ಜನ್ಮಾಷ್ಟಮಿ ಓಣಂ ಹಾಗು ದಸರಾದ ಪ್ರಾಮುಖ್ಯತೆಯ ಬಗ್ಗೆ ಹೇಳಿದರು ,ಸಾನಿಯಾ ಅಥಿತಿ ಪರಿಚಯ ಮಾಡಿದರು ,ವರ್ಷಿತಾ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ವೈಷ್ಣವಿ ದೇವಾಡಿಗ ಇವರು ನಿರೂಪಿಸಿದರು. ಕಾರ್ಯಕ್ರಮವು ನೃತ್ಯ , ಗೀತೆ ಹಾಗು ಆಟಗಳೊಂದಿಗೆ ಸಂಪನ್ನಗೊಂಡಿತು.