ಶಿಮಂತೂರು, 15 ಆಗಸ್ಟ್ 2025: 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶ್ರೀ ಶಾರದ ಸೆಂಟ್ರಲ್ ಸ್ಕೂಲ್ ಶಿಮಂತೂರಿನಲ್ಲಿ ವೈಭವದಿಂದ ಆಚರಿಸಲಾಯಿತು. ಶ್ರೀ ಶಾರದ ಸೊಸೈಟಿ (ರಿ) ಶಿಮಂತೂರು ಇದರ ಅಧ್ಯಕ್ಷರಾದ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಧ್ವಜಾರೋಹಣವನ್ನು ನಡೆಸಿದರು.

ಜನ ವಿಕಾಸ ಸಮಿತಿ ಮೂಲ್ಕಿಯ ಸದಸ್ಯ ಪ್ರಾಣೇಶ್ ಭಟ್ ಡೆಂದಡ್ಕ ದಿಕ್ಸೂಚಿ ಭಾಷಣ ಮಾಡಿದರು. ಶಾಲಾ ಸಂಚಾಲಕ ದೇವ ಪ್ರಸಾದ್ ಪುನರೂರು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸುಮನಾ, ಪ್ರಾಚಾರ್ಯ ಜಿತೇಂದ್ರ ವಿ ರಾವ್, ಜನ ವಿಕಾಸ ಸಮಿತಿಯ ಸದಸ್ಯರು, ಶಾಲಾ ಸಿಬ್ಬಂದಿವರ್ಗ, ಹಳೆ ವಿದ್ಯಾರ್ಥಿಗಳು, ಅಂಚೆ ಕಚೇರಿಯ ಸಿಬ್ಬಂದಿ ವರ್ಗ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

ನಂತರ ಶಾಲೆಯಲ್ಲಿ ಪುನರೂರು ಪ್ರತಿಷ್ಠಾನದ ವತಿಯಿಂದ ಉಚಿತ ಆಧಾರ್ ನೋಂದಣಿ ಮತ್ತು ಪರಿಷ್ಕರಣ ಶಿಬಿರವನ್ನು ನಡೆಸಲಾಯಿತು. ಉಡುಪಿ ಶ್ರೀ ಕೃಷ್ಣ ಮಠ, ಪ್ರದೀಪ್ ಶೆಟ್ಟಿ ಮಜಲಗುತ್ತು, ದುರ್ಗಾ ಪ್ರಸಾದ್ ಮೂಡುಮನೆ ಎಳತ್ತೂರು ಹಾಗೂ ಶಿಕ್ಷಕ ರಕ್ಷಕ ಸಂಘದ ವತಿಯಿಂದ ವಿವಿಧ ಸಿಹಿತಿಂಡಿ ಹಾಗೂ ತಂಪು ಪಾನೀಯ ವಿತರಿಸಲಾಯಿತು.