ಮಂಗಳೂರು, 11 ಮಾರ್ಚ್ 2025: ಶ್ರೀ ದೇವಿ ಕಾಲೇಜ್ ಆಫ್ ಫ್ಯಾಷನ್ ಡಿಸೈನ್ ಬಲ್ಲಾಳ್ಭಾಗ್ ಮಂಗಳೂರು ಇವರ ವತಿಯಿಂದ ಮಹಿಳಾ ದಿನಾಚರಣೆಯನ್ನು ಕಾಲೇಜಿನಲ್ಲಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಮಂಗಳೂರಿನ ಕೆ .ಎ.ಎಮ್.ಸಿ ಯ ಸಹಾಯಕ ಅದ್ಯಾಪಕರಾದ ಡಾಕ್ಟರ್ ರೂಪ ರಾವ್ ಆಗಮಿಸಿ ನಾರಿ ಶಕ್ತಿ ಎಂದರೇನು, ಆಕೆ ಏನನ್ನು ಸಾಧಿಸಬಲ್ಲಳು , ಹೀಗೆ ನಾವಿರಬೇಕು ಎನ್ನುತ್ತಾ ಶುಭ ಹಾರೈಸಿದರು.
ಪ್ರಾಂಶುಪಾಲಾರದ ಪ್ರೊ | ಕಸ್ತೂರಿ ಜೆ ಶೆಟ್ಟಿ ಉಪಸ್ಥಿತರಿದ್ದು ತಾನೂಬ್ಬ ಮಹಿಳೆಯಾಗಿರುವುದಕ್ಕೆ ಹೆಮ್ಮೆಯನ್ನು ವ್ಯಕ್ತಪಡಿಸಿದರು ಸಹಶಿಕ್ಷಕರಾದ ಪ್ರಭ ಶೆಟ್ಟಿ, ಉಪಸ್ಥಿತರಿದ್ದು, ಸಾರಾ ಹುದ ನಿರೂಪಿಸಿದರು, ದಿವಿನ ಸಲ್ದಾನ ಸ್ವಾಗತಿಸಿದರು, ಭಾಗೀರಥಿ ನಾವಡ ಮಹಿಳಾ ದಿನಾಚರಣೆಯ ಮಹತ್ವ ತಿಳಿಸಿದರು, ಪೂಜ ಅತಿಥಿಯ ಪರಿಚಯ ನೀಡಿದರು, ಸಾನಿಯ ವಂದಿಸಿದರು.ಹಬ್ಬದ ಪ್ರಯುಕ್ತ ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮದ ವಿಜೇತರಿಗೆ ಬಹುಮಾನವನ್ನು ನೀಡುವುದರ ಜೊತೆಗೆ ಸಿಹಿತಿಂಡಿಯನ್ನು ನೀಡಲಾಯಿತು . ವಿಭಾಗದ ಮಂತ್ರಿಮಂಡಲದ ಉಸ್ತುವಾರಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.