ಮಂಗಳೂರು, 15 ಆಗಸ್ಟ್ 2025: ಶ್ರೀ ದೇವಿ ಕಾಲೇಜ್ ಆಫ್ ಫ್ಯಾಷನ್ ಡಿಸೈನ್ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಂಗಳೂರು ಫೈರ್ ಆಂಡ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು ಹಾಗು ಭಾರತೀಯ ವಾಯುಸೇನೆಯ ಸಾರ್ಜೆಂಟ್ ಯಶ್ವಂಥ್ ಗೋಪಾಲ್ ಶೆಟ್ಟಿಯವರು ವಿಧ್ಯಾರ್ಥಿಗಳಿಗೆ ಶುಭಹಾರೈಸಿದರು.

ಪ್ರಾಂಶುಪಾಲರಾದ ಡಾ. ಕಸ್ತೂರಿ ಜೆ ಶೆಟ್ಟಿಯವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು. ಸಹಸಿಕ್ಷಕರಾದ ಪ್ರಭ ಶೆಟ್ಟಿ, ಸೌಜನ್ಯ ಆಚಾರ್ಯ, ಬಿಂದು ಶೆಟ್ಟಿ ಹಾಗು ಮೈಥಿಲಿ ಸೋಮಯಾಜಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತಿಶಾ ಫಾತಿಮಾ ಯೂಸುಫ್ ನಿರೂಪಿಸಿದರು, ಸಾನಿಯ ಸ್ವಾಗತಿಸಿದರು, ವೈಭವ್ ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರು, ಶ್ರೀಪ್ರದಾ ರಾವ್ ವಂದಿಸಿದರು. ಕಾರ್ಯಕ್ರಮದ ಪ್ರಯುಕ್ತವಾಗಿ ಅಂತರ್ ವಿಭಾಗ ವಿಧ್ಯಾರ್ಥಿಗಳಿಗೆ ಚಿತ್ರಕಲೆ, ದೇಶಭಕ್ತಿಗೀತೆ, ಪ್ರಬಂಧ, ಪ್ರಶ್ನೋತ್ತರ ಸ್ಪರ್ಧಗಳನ್ನು ಆಯೋಜಿನಲಾಗಿತ್ತು ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
