ಬಲ್ಲಾಳ್ಭಾಗ್, 3 ಜುಲೈ 2025: ಶ್ರೀ ದೇವಿ ಕಾಲೇಜ್ ಆಫ್ ಫ್ಯಾಷನ್ ಡಿಸೈನ್ ಮಂಗಳೂರು ಇವರ ವತಿಯಿಂದ ಕೂನೆಯ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವನ್ನು ಕಾಲೇಜಿನಲ್ಲಿ ಆಯೋಜಿಸಲಾಯಿತು. ಪ್ರಾಂಶುಪಾಲಾರದ ಪ್ರೊ | ಕಸ್ತೂರಿ ಜೆ ಶೆಟ್ಟಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ ನಿಮ್ಮ ಮುಂದಿನ ಜೀವನ ಸಫಲವಾಗಲೆಂದು ಶುಭಹಾರೈಸಿದರು .
ಸಹಶಿಕ್ಷಕರಾದ ಸೌಜನ್ಯ ಉಪಸ್ಥಿತರಿದ್ದು, ಝೈಮಾ ನಿರೂಪಿಸಿದರು, ರಕ್ಷತ್ ವಿ ಕೋಟಿಯಾನ್ ಸ್ವಾಗತಿಸಿ , ಧಾತ್ರಿ ಆರ್ ಭಟ್ಟ್ ವಂದಿಸಿದರು.
ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಆಗಮಿಸಿದ ಸ್ಕೂಲ್ ಲೀಡರ್ ಸಿನಿಮಾ ತಂಡ , ಈ ಸಮಾರಂಭದಲ್ಲಿ ಭಾಗಿಯಾಗಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡಿತು.