ಕೇಂಜಾರ್: ಶ್ರೀ ದೇವಿ ಕಾಲೇಜ್ ಆಫ್ ಫ್ಯಾಷನ್ ಡಿಸೈನ್ ಇವರ ವತಿಯಿಂದ ಹೊಸ ವಿಧ್ಯಾರ್ಥಿಗಳಿಗೆ ಫ್ರಶರ್ಸ್ ಪಾರ್ಟಿಯೂ ಶ್ರೀ ದೇವಿ ತಾಂತ್ರಿಕ ವಿದ್ಯಾಲಯ ಕೇಂಜಾರಿನಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಡಾ| ಪ್ರಿಯದರ್ಶಿನಿ ರೈ ಫೌಂಡರ್ ಆಫ್ ಬೀಟ್ ವೆಲ್ನೆಸ್ ಇವರು ಉಪಸ್ಥಿತರಿದ್ದರು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪ್ರಾಂಶುಪಾಲರಾದ ಡಾ| ಕಸ್ತೂರಿ ಜೆ ಶೆಟ್ಟಿ ಅವರು ಉಪಸ್ಥಿತರಿದ್ದರು.ಸಹ ಶಿಕ್ಷಕರಾದ ಪ್ರಭಾ ಶೆಟ್ಟಿ , ಬಿಂದು ಶೆಟ್ಟಿ,ಮೈಥಿಲಿ ಸೋಮಯಾಜಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹಝೀರಾ ಜೈಮಾ ನಿರೂಪಿಸಿದರು, ರೀಶೈಲ್ ಸ್ವಾಗತಿಸಿದರು, ವೈಷ್ಣವಿ ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರು, ವರ್ಷಿತ ವಂದಿಸಿದರು.ವೈಷ್ಣವಿ ದೇವಾಡಿಗ ನಿರೂಪಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಟಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.