ಮಂಗಳೂರು: ಶ್ರೀ ದೇವಿ ಕಾಲೇಜ್ ಆಫ್ ಫ್ಯಾಷನ್ ಡಿಸೈನ್ ಬಳ್ಳಾಲ್ಬಾಗ್, ಮಂಗಳೂರು ಇಲ್ಲಿನ ಮಂತ್ರಿಮಂಡಲ ಪದಗ್ರಹಣವು ಕಾಲೇಜಿನಲ್ಲಿ ನಡೆಯಿತು. ಮುಖ್ಯ ಅಥಿತಿಗಳಾಗಿ ಪ್ರೊ| ದಿವ್ಯ ಯನ್ ಶೆಟ್ಟಿ ಅವರು ಉಪಸ್ಥಿತರಿದ್ದು ಮಂತ್ರಿಮಂಡಲದ ಸದಸ್ಯರಿಗೆ ಶುಭಹಾರೈಸಿದರು.ಹಾಗೂ ಫ್ಯಾಷನ್ ಡಿಸೈನ್ ವಿಭಾಗವನ್ನು ಹುರುದುಂಬಿಸಿದರು.

ಪ್ರಾಂಶುಪಾಲರಾದ ಪ್ರೊ| ಕಸ್ತೂರಿ ಜೆ ಶೆಟ್ಟಿ ಅವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.ಸಹಶಿಕ್ಷಕರಾದ ಪ್ರಭ ಶೆಟ್ಟಿ, ಸೌಜನ್ಯ ಆಚಾರ್ಯ, ಬಿಂದು ಶೆಟ್ಟಿ ಉಪಸ್ಥಿತರಿದ್ದರು.ಹೊಸತಾಗಿ ಮಂತ್ರಿಮಂಡಲಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ಹಾಕುದರ ಜೊತೆಗೆ ಪ್ರಾಂಶುಪಾಲೆ ಪ್ರಮಾಣ ವಚನ ಬೋದಿಸಿದರು.

ನಾಯಕಿಯಾಗಿ ಶ್ರೀಪ್ರದ ರಾವ್, ಕಾರ್ಯದರ್ಶಿಯಾಗಿ ವೈಷ್ಣವಿ ಎಸ್, ಹಣಕಾಸು ಸಚಿವರಾಗಿ ಹಝೀರ ಜೈಮಾ, ಸಾಂಸ್ಕೃತಿಕ ಪ್ರತಿನಿಧಿಗಳಾಗಿ ನೀಕ್ಷಿತ ಮತ್ತು ಪ್ರತೀಕ್ಷಾ,ಮಾಧ್ಯಮ ಪ್ರತಿನಿಧಿಗಳಾಗಿ ವರ್ಷಿಣಿ ಮತ್ತು ವೈಭವ್,ಕ್ಲಾಸ್ ವರ್ಗ ಪ್ರತಿನಿಧಿಯಾಗಿ ತೃತೀಯ ವಿಭಾಗದಿಂದ ಶೋಭ ,ದ್ವಿತೀಯ ವಿಭಾಗದಿಂದ ರಮ್ಯಾ ಮತ್ತು ವೈಷ್ಣವಿ ದೇವಾಡಿಗ ಆಯ್ಕೆಯಾಗಿರುತ್ತಾರೆ.