ಮಂಗಳೂರು, 31 ಅಕ್ಟೋಬರ್ 2025: ಶ್ರೀ ದೇವಿ ಕಾಲೇಜ್ ಆಫ್ ಫ್ಯಾಷನ್ ಡಿಸೈನ್ ಇದರ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ದೀಪ ಪಾವಂಜೆ ಕನ್ನಡ ಅಧ್ಯಯನ ವಿಭಾಗ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜ್ ಮಂಗಳೂರು ಇವರು ಕನ್ನಡ ಭಾಷೆಯ ಇತಿಹಾಸ , ಕನ್ನಡ ಕವಿಗಳ ಬಗ್ಗೆ ಹಾಗು ನಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸುವ ಬಗ್ಗೆ ವಿಧ್ಯಾರ್ಥಿಗಳಿಗೆ ಅರಿವನ್ನು ಮೂಡಿಸುವಂತೆ ಮಾತನಾಡಿದರು.

ಪ್ರಾಂಶುಪಾಲಾರದ ಡಾ.ಕಸ್ತೂರಿ ಜೆ ಶೆಟ್ಟಿ ಕನ್ನಡ ಭಾಷೆಯ ಮಹತ್ವದ ಬಗ್ಗೆ ಮಾತನಾಡಿದರು ಹಾಗೂ ಕಾರ್ಯಕ್ರಮವನ್ನು ಆಯೋಜಿಸಿರುವ ವಿದ್ಯಾರ್ಥಿಗಳ ಪರಿಶ್ರಮವನ್ನು ಪ್ರಶಂಸಿಸಿದರು. ಸಹಶಿಕ್ಷಕರಾದ ಪ್ರಭ ಶೆಟ್ಟಿ ಹಾಗು ಸೌಜನ್ಯ ಆಚಾರ್ಯ ಉಪಸ್ಥಿತರಿದ್ದರು. ವೈಭವ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು, ದಿವೀಕ್ಷ ಸ್ವಾಗತಿಸಿದರು, ರಮ್ಯ ಕನ್ನಡದ ಮಹತ್ವದ ಬಗ್ಗೆ ತಿಳಿಸಿದರು, ರೀವ ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರು, ಶ್ರುತಿ ಧನ್ಯವಾದಗಳನ್ನು ಕೋರಿದರು.
ಕಾರ್ಯಕ್ರಮದ ಅಂಗವಾಗಿ ವಿಭಾಗದ ವಿಧ್ಯಾರ್ಥಿಗಳಿಗೆ ಜನಪದಗೀತೆ, ಪ್ರಭಂದ, ಚಿತ್ರಕಲೆ, ರಸಪ್ರಶ್ನೆ ಹಾಗು ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿಜೇತರಿಗೆ ಮುಖ್ಯ ಅತಿಥಿಗಳಾಗಿರುವ ದೀಪ ಪಾವಂಜೆ ಇವರು ಬಹುಮಾನಗಳನ್ನು ವಿತರಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಕೆಲವು ಮನೋರಂಜನಾ ಕಾರ್ಯಕ್ರಮಗಳ ಮೂಲಕ ಕಾರ್ಯಕ್ರಮ ಕೊನೆಗೊಂಡಿತು.