ಮಂಗಳೂರು: ಶ್ರೀ ದೇವಿ ಕಾಲೇಜ್ ಆಫ್ ಫ್ಯಾಷನ್ ಡಿಸೈನ್ ಬಲ್ಲಾಳ್ಭಾಗ್ ಮಂಗಳೂರು ಇವರ ವತಿಯಿಂದ ಕೂನೆಯ ವರ್ಷದ ವಿದ್ಯಾರ್ಥಿಗಳಿಗೆ ವಿಧಾಯ ಸಮಾರಂಭವನ್ನು ಕಾಲೇಜಿನಲ್ಲಿ ಆಯೋಜಿಸಲಾಯಿತು. ಪ್ರಾಂಶುಪಾಲಾರದ ಪ್ರೊ | ಕಸ್ತೂರಿ ಜೆ ಶೆಟ್ಟಿ ಉಪಸ್ಥಿತರಿದ್ದು, ತಮ್ಮ ಮನದ ಮಾತುಗಳಿಂದ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಾ ನಿಮ್ಮ ಮುಂದಿನ ಜೀವನ ಸಫಲವಾಗಲೆಂದು ಶುಭಹಾರೈಸಿದರು .
ಸಹಶಿಕ್ಷಕರಾದ ಪ್ರಭ ಶೆಟ್ಟಿ ಉಪಸ್ಥಿತರಿದ್ದು, ಶ್ರೀಪ್ರದ ನಿರೂಪಿಸಿದರು, ವೈಷ್ಣವಿ ವಂದಿಸಿದರು.ಕಾರ್ಯಕ್ರಮದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮನ್ನು ನಡೆಸಲಾಯಿತು.ಕೊನೆಯ ವರುಷದ ವಿದ್ಯಾರ್ಥಿಗಳಿಗೆ ನೀಡಲಾದ ಉಡುಗರೆಯು ಮನಭರಿತಗೊಳಿಸಿತು.