ಮಂಗಳೂರು: ಶ್ರೀ ದೇವಿ ಕಾಲೇಜ್ ಆಫ್ ಫ್ಯಾಷನ್ ಡಿಸೈನ್ ವಿದ್ಯಾರ್ಥಿಗಳಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪ್ರತೀಕ್ಷಾ ಫೌಂಡರ್ ಆಫ್ ಟೀಮ್ ಉಪಾಸನಾ ಇವರು ತಮ್ಮ ಸ್ಪೂರ್ತಿದಾಯಕ ಮಾತುಗಳು ಹಾಗೂ ಸಲಹೆಗಳ ಮೂಲಕ ಮಕ್ಕಳಿಗೆ ಪ್ರೇರಣೆ ನೀಡಿದರು.
ಪ್ರಾಂಶುಪಾಲಾರದ ಡಾ.ಕಸ್ತೂರಿ ಜೆ ಶೆಟ್ಟಿ ಇವರು ವಿಧ್ಯಾರ್ಥಿಗಳಿಗೆ ದೀಪಾವಳಿ ಹಬ್ಬದ ಮಹತ್ವದ ಬಗ್ಗೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಹಬ್ಬದ ಪ್ರಾಮುಖ್ಯತೆಯನ್ನು ತಿಳಿಸಿದರು. ಸಹಾ ಶಿಕ್ಷಕರಾಧ ಸೌಜನ್ಯ ಆಚಾರ್ಯ ಉಪಸ್ಥಿತರಿದ್ದರು.
ಪ್ರೀತಿಕಾ ಶೆಟ್ಟಿ ನಿರೂಪಿಸಿದರು. ಅಲಿಜಾ ಅತಿಥಿಗಳನ್ನು ಪರಿಚಯಿಸಿದರು, ಸುಹಾ ಸ್ವಾಗತಿಸಿದರು, ದಿವೀಕ್ಷ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು, ಮ್ಯಾವ್ಲಿಯಾನ್ ಧನ್ಯವಾದ ಕೋರಿದರು.ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಮದರಂಗಿ, ದೀಪಾಲಂಕಾರ,ರಂಗೋಲಿ, ಗೂಡು ದೀಪ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿಜೇತರಿಗೆ ಮುಖ್ಯ ಅಥಿತಿಗಳು ಬಹುಮಾನಗಳನ್ನು ವಿತರಿಸಿದರು.