ಮಂಗಳೂರು, 4 ಸೆಪ್ಟೆಂಬರ್ 2025: ಶ್ರೀ ದೇವಿ ಕಾಲೇಜ್ ಆಫ್ ಫ್ಯಾಷನ್ ಡಿಸೈನ್ ಕಾಲೇಜಿನಲ್ಲಿ ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿಗಳಿಂದ ಶಿಕ್ಷಕರ ದಿನಾಚರಣೆಯನ್ನು ಆಯೋಜಿಸಲಾಗಿತ್ತು.

ಪ್ರಾಂಶುಪಾಲರಾದ ಡಾ| ಕಸ್ತೂರಿ ಜೆ ಶೆಟ್ಟಿ ಇವರು ಕಾರ್ಯಕ್ರಮವನ್ನು ಆಯೋಜಿಸಿದಕ್ಕಾಗಿ ವಿದ್ಯಾರ್ಥಿಗಳನ್ನು ಪ್ರಸಂಶಿಸಿದರು ಹಾಗು ಸಹ ಶಿಕ್ಷಕರಾದ ಸೌಜನ್ಯ ಆಚಾರ್ಯ, ಶಿಫಾನ, ಸುಹಾನ ಇವರು ಆಚರಣೆಯಲ್ಲಿ ಪಾಲುಗೊಂಡರು.

ಕಾರ್ಯಕ್ರಮವನ್ನು ಸಾನಿಯಾ ನಿರೂಪಿಸಿದರು, ನೂಫೈಲ ಸ್ವಾಗತಿಸಿದರು, ವರ್ಷಿಣಿ ಶಿಕ್ಷಕರ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು. ಶ್ರೀಪ್ರದ ರಾವ್ ಇವರಿಂದ ಶಿಕ್ಷಕರಿಗೆ ವಿವಿಧ ಆಟಗಳನ್ನು ನಡೆಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಉಡುಗರೆಯನ್ನು ನೀಡಿದರು.