ಗುರುಗಳು, ಶಿಸ್ತು, ಶ್ರದ್ಧೆ ಮತ್ತು ಜ್ಞಾನದ ಪ್ರತಿಬಿಂಬ : ಗುಣಕರ ರಾಮದಾಸ
ಶಿಮಂತೂರು, 10 ಜುಲೈ 2025: ಗುರು ಪೂರ್ಣಿಮೆ ದಿನವನ್ನು ಆಚರಿಸುವುದು ನಮ್ಮ ಸಂಸ್ಕೃತಿಯ ಜ್ಞಾನ ಪರಂಪರೆಗಾಗಿ ನಮಿಸುವ ಸನ್ನಿವೇಶ. ನಮ್ಮ ಗುರುಗಳು ನಮ್ಮ ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ನಮ್ಮನ್ನು ಮಾರ್ಗದರ್ಶನ ಮಾಡುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತಾರೆ. ತಂದೆ-ತಾಯಿಗೆ ಇರುವಂತ ಶ್ರೇಷ್ಠ ಸ್ಥಾನದಲ್ಲಿ ನಿಲ್ಲುವ ಗುರುಗಳು, ಶಿಸ್ತು, ಶ್ರದ್ಧೆ ಮತ್ತು ಜ್ಞಾನದ ಪ್ರತಿಬಿಂಬ. ಗುರುಗಳ ಮಾರ್ಗದರ್ಶನವಿಲ್ಲದ ಬದುಕು ದಿಕ್ಕಿಲ್ಲದ ನಾವಿಕನಂತೆ. ಅವರು ನಮಗೆ ದಾರಿ ತೋರಿಸುತ್ತಾರೆ, ಬೆಳಕು ನೀಡುತ್ತಾರೆ. ಹೀಗಾಗಿ ಗುರುಗಳ ಆರಾಧನೆ ವಿದ್ಯಾರ್ಥಿಗಳ ಆದ್ಯ ಕರ್ತವ್ಯ ಎಂದು ಮಂಗಳೂರಿನ ಇಸ್ಕಾನ್ ನ ಅಧ್ಯಕ್ಷರು ಹಾಗೂ ಅಕ್ಷಯಪಾತ್ರ ಪೌಂಡೇಶನ್ ಕರ್ನಾಟಕದ ವಲಯ ಅಧ್ಯಕ್ಷರಾದ ಗುಣಕರ ರಾಮದಾಸ ತಿಳಿಸಿದರು.

ಇವರು ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನಲ್ಲಿ ಆಚರಿಸಿದ ಗುರು ಪೂರ್ಣಿಮೆ ಕಾರ್ಯಕ್ರಮದ ಉದ್ಘಾಟಕರಾಗಿ ಗುರು ಪೂರ್ಣಿಮೆಯ ಮಹತ್ವವನ್ನು ತಿಳಿಸಿದರು.
ಶಿಮಂತೂರಿನ ಶ್ರೀ ಶಾರದಾ ಸೊಸೈಟಿಯ ಶಿಮಂತೂರಿನ ಅಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಇದು ಕೇವಲ ಧಾರ್ಮಿಕ ಆಚರಣೆ ಅಷ್ಟೇ ಅಲ್ಲ, ನಮ್ಮನ್ನು ಬೆಳಗಿಸುವ ಮತ್ತು ಮಾರ್ಗದರ್ಶನ ಮಾಡುವ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಗುರುಗಳಿಗೆ ಗೌರವ ಮತ್ತು ಕೃತಜ್ಞತೆಯನ್ನು ವ್ಯಕ್ತ ಪಡಿಸುವ ಸುಸಂದರ್ಭ ಈ ದಿನ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಂಗಳೂರಿನ ಇಸ್ಕಾನ್ ನ ಅಧ್ಯಕ್ಷರಿಗೆ ಹಾಗೂ ಹಿರಿಯ ಭಕ್ತಾರಾದ ನಂದನ ಆಚಾರ್ಯ ದಾಸ ಇವರುಗಳಿಗೆ ಶಾಲಾ ವಿದ್ಯಾರ್ಥಿಗಳು ಗೌರವಿಸಿ ಗುರು ಪೂಜೆಯನ್ನು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಶಿಮಂತೂರಿನ ಶ್ರೀ ಶಾರದಾ ಸೊಸೈಟಿಯ ಕೋಶಾಧಿಕಾರಿಗಳಾದ ಕೊ. ಭುವನಾಭಿರಾಮ ಉಡುಪ, ನಿರ್ದೇಶಕರಾದ ಸುರೇಶ್ ರಾವ್ ನಿರಳಿಕೆ, ಶಾಲಾ ಶಿಕ್ಷಕರ ರಕ್ಷಕರ ಸಂಘದ ಅಧ್ಯಕ್ಷೆ ಸುಮನ, ಮಂಗಳೂರಿನ ಅಕ್ಷಯಪಾತ್ರ ಫೌಂಡೇಶನ್ ನ ಪಿ.ಆರ್. ಓ. ಶಶಿಕಲಾ, ಎಸ್ .ಆರ್. ಓ. ನಿತಿನ್ ಉಪಸ್ಥಿತರಿದ್ದರು.

ಶಾಲಾ ಸಂಚಾಲಕರಾದ ದೇವಪ್ರಸಾದ್ ಪುನರೂರು ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು, ಪ್ರಾಂಶುಪಾಲರಾದ ಜಿತೇಂದ್ರ ವಿ ರಾವ್ ವಂದಿಸಿದರು, ಸಹ ಶಿಕ್ಷಕಿ ನಿಶ್ಮಿತ ಕಾರ್ಯಕ್ರಮ ನಿರೂಪಿಸಿದರು.