ಶಿಮಂತೂರು, 9 ಆಗಸ್ಟ್ 2025: ಶ್ರಾವಣ ಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ, ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ರಕ್ಷಾ ಬಂಧನವನ್ನು ಆಚರಿಸಲಾಯಿತು.

ಸಾಮಾಜಿಕ ಕಾರ್ಯಕರ್ತ ಶ್ರೀ ಪಾರ್ಥ ಸಾರಥಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಈ ಹಬ್ಬದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು.

ಅವರೊಂದಿಗೆ ಅಭಿಷೇಕ್, ಗಣೇಶ್ ಭಟ್, ಪೂರ್ಣೇಶ್ ವೇಣೂರು, ಪ್ರಾಚಾರ್ಯ ಜಿತೇಂದ್ರ ವಿ. ರಾವ್ ಎನ್ ಎಸ್ ಎಸ್ ಅಧಿಕಾರಿ ಐಶ್ವರ್ಯ, ಸಹ ಶಿಕ್ಷಕಿ ನಿಶ್ಮಿತ , ಅಮಿತ ಉಪಸ್ಥಿತರಿದ್ದರು.