ಮೂಡ್ಲಕಟ್ಟೆ, 27 ಫೆಬ್ರವರಿ 2025: ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ಐಟಿ ಫಾರಂ ಹಾಗೂ ಕೋಡಿಂಗ್ ಕ್ಲಬ್ ವೇದಿಕೆಯ ಸಹಬಾಗಿತ್ವದಲ್ಲಿ, ರಾಷ್ಟೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಅಪ್ಲಿಕೇಶನ್ ಆಫ್ ಪೈಥಾನ್ ಅಂಡ್ ಮೆಷೀನ್ ಲರ್ನಿಂಗ್ ಇನ್ ಡ್ರಗ್ ಡಿಸ್ಕವರಿ ಅಂಡ್ ಡೆವಲಪ್ಮೆಂಟ್‘ ಎಂಬ ವಿಷಯದ ಕುರಿತು ಕಾರ್ಯಗಾರವು ಜರಗಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮೂಡ್ಲಕಟ್ಟೆ ಎಂಐಟಿಯ ಡಿನ್ ಆಫ್ ರಿಸರ್ಚ್ ಅಂಡ್ ಕನ್ಸಲ್ಟೆನ್ಸಿ ಮತ್ತು ಎಐಎಂಎಲ್ ವಿಭಾಗ ಮುಖ್ಯಸ್ಥರಾದ ಡಾ. ಇಂದ್ರ ವಿಜಯ್ ಸಿಂಗ್ ರವರು ಭಾಗವಹಿಸಿ ವಿಷಯದ ಕುರಿತು ಸವಿಸ್ತಾರವಾದ ಮಾಹಿತಿಯನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು. ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಬಿಸಿಎ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಉಪ ಪ್ರಾಂಶುಪಾಲರಾದ ಶ್ರೀ ಜಯಶೀಲ್ ಕುಮಾರ್, ಬಿಸಿಎ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸ್ವರ್ಣರಾಣಿ ಹಾಗೂ ಬಿಸಿಎ ವಿಭಾಗದ ಉಪನ್ಯಾಸಕರಾದ ಶ್ರೀ ಜಿತೇಶ್ ಕುಮಾರ್ ಎ. ಎಚ್ ರವರು ಉಪಸ್ಥಿತರಿದ್ದರು. ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಕು. ಸಿಂಚನ ಶೆಟ್ಟಿ ಅತಿಥಿ ಪರಿಚಯವನ್ನು ಹಾಗೂ ವಂದಿಸಿದರು.ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಕು. ರಶಿತಾ ಕಾರ್ಯಕ್ರಮವನ್ನು ನಿರೂಪಿಸಿದರು.