ಕಕ್ಯಪದವು, 28 ಅಕ್ಟೋಬರ್ 2024: ಎಲ್ ಸಿ ಆರ್ ಇಂಡಿಯನ್ ಕಾಲೇಜು ಕಕ್ಯಪದವು, ಇಲ್ಲಿನ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ವಿವಿಧ ವೃತ್ತಿ ತರಭೇತಿ ಕೋಸ್೯ಗಳ ಬಗ್ಗೆ ಮಾಹಿತಿ ನೀಡಲಾಯಿತು. ಸ್ಪ್ರಿಂಗ್ಸ್ ಸಂಸ್ಥೆ ಮಂಗಳೂರು ಇಲ್ಲಿನ ಸಂಯೋಜಕರಾದ ಶೇರ್ಲಿ ಅಬ್ರಾಹಂ ಇವರು ಸಂಸ್ಥೆಗೆ ಆಗಮಿಸಿ ಉತ್ತಮ ಉದ್ಯೋಗಕ್ಕಾಗಿ ಶಿಕ್ಷಣವೆಂಬಂತೆ ವಿದ್ಯಾರ್ಥಿಗಳಿಗೆ ಲಭ್ಯವಿರುವ ಹಲವಾರು ಔದ್ಯೋಗಿಕ ಕೋಸ್೯ಗಳ ಮಾಹಿತಿಯ ಜೊತೆಗೆ ಉದ್ಯೋಗ ಅವಕಾಶಗಳನ್ನು ಹೇಗೆ ಸೃಷ್ಟಿಸಿಕೊಳ್ಳಬಹುದು ಎಂಬುದಾಗಿ ಉಪಯುಕ್ತ ಮಾಹಿತಿಯನ್ನು ನೀಡಿದರು.
ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೋ, ಸಂಯೋಜಕರಾದ ಯಶವಂತ್ ಜಿ ನಾಯಕ್, ಪದವಿ ವಿಭಾಗದ ಮುಖ್ಯಸ್ಥೆಯಾದ ದೀಕ್ಷಿತಾ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ, ವಿಂದ್ಯಾಶ್ರೀ ಇವರು ಸ್ವಾಗತಿಸಿ ವಂದಿಸಿದರು