ಉಜಿರೆ, ನವೆಂಬರ್ 7, 2024: ಶ್ರೀಧ.ಮಂ ಅನುದಾನಿತ ಸೆಕೆಂಡರಿ ಶಾಲೆ ಉಜಿರೆ ಶಾಲೆಯ ವಿದ್ಯಾರ್ಥಿಗಳು ದಿನಾಂಕ 06-11-2024ರಂದು ಕೆಪಿಎಸ್ ಪ್ರೌಢಶಾಲೆ ಪೂಂಜಾಲ್‌ಕಟ್ಟೆಯಲ್ಲಿ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದಾರೆ.
ರಸಪ್ರಶ್ನೆ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ದರ್ಶನ್ ಮತ್ತು ಪ್ರೀತಮ್ ಪಾಟೀಲ್ ದ್ವಿತೀಯ ಸ್ಥಾನ ಗಳಿಸಿರುತ್ತಾರೆ
,ಜನಪದ ನೃತ್ಯ ಸ್ಪರ್ಧೆಯಲ್ಲಿ ಅನನ್ಯ,ಕೀರ್ತನಾ,ದೀಕ್ಷಾ,ಅನನ್ಯ, ಐಶ್ರ‍್ಯ, ಧನಲಕ್ಷ್ಮೀ, ವರ್ಷಿತ್, ಅಂಕಿತ್, ಸಂಕೇತ್,ದನುಷ್, ನಿಶಿತ್,ನಿತಿನ್ ,ಇವರನ್ನೊಳಗೊಂಡ ತಂಡವು ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ತುಳು ಭಾಷಣ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಧನ್ಯಶ್ರೀ, ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಸಾಧಕರನ್ನು ಶಾಲಾ ಮುಖ್ಯೋಪಾಧ್ಯರಾದ ಶ್ರೀ ಸುರೇಶ್ ಮತ್ತು ಶಿಕ್ಷಕವೃಂದ ಅಭಿನಂದಿಸಿದ್ದಾರೆ