ಉಜಿರೆ, 25 ನವಂಬರ್ 2024: ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆ ಮತ್ತು ಶ್ರೀ ಧ.ಮಂ ಅಂಗ್ಲ ಮಾಧ್ಯಮ (ರಾಜ್ಯ ಪಠ್ಯಕಮ)ಹಾಗೂ ಶ್ರೀ ಧ.ಮಂ ಅಂಗ್ಲ ಮಾಧ್ಯಮ (ಸಿ.ಬಿಎಸ್.ಇ ) ಶಾಲೆಗಳ ವಾರ್ಷಿಕ ಕ್ರೀಡಾಕೂಟವ ರತ್ನವರ್ಮ ಕ್ರೀಡಾಂಗಣದಲ್ಲಿ ದಿನಾಂಕ 23-11-2024ರಂದು ಜರಗಿತು.

ಆತಿಥಿಗಳಾಗಿ ಸಂತೋಷ್ ಕುಮಾರ್ ಬೀಟ್ ಪಾರೆಸ್ಟ್ರ್ ಬೆಳ್ತಂಗಡಿ ಇವರು ದ್ವಜಾರೋಹಣ ಮಾಡಿ ವಿದ್ಯಾರ್ಥಿಗಳಲ್ಲಿ ಕ್ರೀಡೆಯಲ್ಲಿ ಆಸಕ್ತಿ ವಹಿಸಿ ಮುಂದೆ ಇದು ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ. ಹೆಚ್ಚಿನ ಉದ್ಯೋಗಗಳು ಕ್ರೀಡೆಗೆ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದರು. ಶ್ರೀ ಧ.ಮಂ ಅಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ವಿಭಾಗದ ಮುಖ್ಯೋಪಾಧ್ಯಯರಾದ ವಿದ್ಯಾಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು

ಶ್ರೀ ಧ.ಮಂ ಅಂಗ್ಲ ಮಾಧ್ಯಮ (ಸಿ.ಬಿಎಸ್.ಇ )ವಿಭಾಗದ ಮುಖ್ಯೋಪಾಧ್ಯಯರಾದ ಶ್ರೀ ಮನಮೋಹನ್ ನಾಯಕ್ ಸ್ವಾಗತಿಸಿದರು. ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆ ಮುಖ್ಯೋಪಾಧ್ಯಯರಾದ ಸುರೇಶ್.ಕೆ ವಂದಿಸಿದರು.