ಉಜಿರೆ, 23 ಆಗೋಸ್ತು 2025: ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆ ಉಜಿರೆಯಲ್ಲಿ ಸಂಸ್ಕೃತೋತ್ಸವ ಆಚರಣೆ ನಡೆಸಲಾಯಿತು. ಶ್ರೀ ಧ.ಮಂ.ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಡಾ. ಪ್ರಸನ್ನ ಕುಮಾರ್ ಐತಾಳ್ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಬಳಿಕ ಮಾತಾಡಿದ ಅವರು ಸಂಸ್ಕೃತ ಶಬ್ಧಕೋಶ ರಚನೆ ಮಾಡಿದ ಪಾಣಿನಿಯ ಬಗ್ಗೆ ಮತ್ತು ವೇದವ್ಯಾಸರ ಸಂಸ್ಕೃತ ಕೃತಿಗಳ ಬಗ್ಗೆ ನಾಲ್ಕು ವೇದಗಳಲ್ಲಿ ಇರುವ ಸಂಸ್ಕೃತ ಸಾರವನ್ನು, ಸಂಸ್ಕೃತದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದವರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು.
ಹಿರಿಯ ಅಧ್ಯಾಪಿಕೆಯಾದ ವಿದ್ಯಾ ಟಿ. ಸಂಸ್ಕೃತ ದಿನಾಚರಣೆಗೆ ಶುಭಾಶಯ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಮುಖ್ಯೋಪಾಧ್ಯಾಯರಾದ ಸುರೇಶ್ .ಕೆ ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದು ಪುರಾತನ ಭಾರತೀಯ ಸಂಸ್ಕೃತಿ, ಸಾಹಿತ್ಯ, ವಿಜ್ಞಾನ ಹಾಗೂ ತತ್ವಶಾಸ್ತ್ರಗಳಲ್ಲಿ ವಿಪುಲವಾಗಿ ಉಪಯೋಗಿಸಲ್ಪಟ್ಟಿರುವ ಭಾಷೆ ಇದಾಗಿದೆ. ಎಂದರು
ಕಾರ್ಯಕ್ರಮದ ಸಂಯೋಜಕಿ ಸಂಸ್ಕೃತ ಶಿಕ್ಷಕಿ ಬಹುಮಾನ ವಿತರಣಾ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿಗಳು ಸಂಸ್ಕೃತ ಪುಸ್ತಕ ಪ್ರದರ್ಶನ, ಮತ್ತು ನೃತ್ಯ ಹಾಡು ಕಥೆ ನಾಟಕ ಪ್ರದರ್ಶಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು, ವಿದ್ಯಾರ್ಥಿಗಳಾದ ಅಕಾಶ್ ಸ್ವಾಗತಿಸಿರು, ವಿಖ್ಯಾತ್ ವಂದಿಸಿದರು, ಕನಕಶ್ರೀ ಕಾರ್ಯಕ್ರಮ ನಿರೂಪಿಸಿದರು