ಉಜಿರೆ, 06 ಸೆಪ್ಪೆಂಬರ್ 2025: ಶ್ರೀಧ.ಮಂ ಅನುದಾನಿತ ಸೆಕೆಂಡರಿ ಶಾಲೆ ಉಜಿರೆ ಶಾಲೆಯಲ್ಲಿ ವಿಜ್ಞಾನ ವಿಚಾರ ಸಂಕಿರಣ ಮತ್ತು ವಿಜ್ಞಾನ ನಾಟಕ ಸ್ಪರ್ಧೆಗಳು ನಡೆಯಿತು ನೋಡಲ್ ಅಧಿಕಾರಿ ಸಿದ್ದಲಿಂಗ ಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತಾಡಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಪರಿಸರದ ಬಗ್ಗೆ ಜಾಗೃತಿ ಮೂಡಬೇಕು ವಿಚಾರಗೋಷ್ಠಿ ವಿಷಯವಾದ ಕ್ವ್ವಾಂಟಮ್ ಯುಗದ ಬಗ್ಗೆ ಡಿಜಿಟಲ್ ಇಂಡಿಯಾ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದರು.
ಮೋಹನ್ ಕುಮಾರ್ ಸಿಯನ್ ಕ್ಷೇತ್ರ ಸಂಪನ್ಮೂಲ ವ್ಯಕ್ತಿಇವರು ಮಾತಡಿ ವಿದ್ಯಾರ್ಥಿಗಳು ದೃಶ್ಯಗಳನ್ನು ನೋಡಿ ಕಲಿಯಬೇಕು ವಿಜ್ಞಾನದ ಪರಿಕಲ್ಪನೆಯನ್ನು ಮೂಡಿಸುವುದು ಅಗತ್ಯ ಎಂದರು.
ವೇದಿಕೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಬಸವಲಿಂಗಪ್ಪ ಟಿ.ಬಿ, ಪ್ರೌಢ ಶಾಲಾ ಶಿಕ್ಷಣ ಸಂಯೋಜಕರಾದ ಶ್ರೀಮತಿ ಚೇತನಾಕ್ಷಿ ಮತ್ತು ಕ್ಷೇತ್ರ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಪ್ರತಿಮಾ ಮತ್ತು ತೀರ್ಪುಗಾರರಾಗಿ ಶರತ್ ಕುಮಾರ್ ನಿಡ್ಲೆ, ನಿರಂಜನ್ ಕೆಪಿಎಸ್ ಪೂಂಜಾ¯ಕಟ್ಟೆ, ಶ್ರೀ ರಾಮಕೃಷ್ಣ ಭಟ್ ಸರಕಾರಿ ಪ್ರೌಢಶಾಲೆ ಬದನಾಜೆ, ಮಹೇಂದ್ರ ಪೂಜಾರಿ ಪುತ್ತಿಲ ಉಪಸ್ಥಿತರಿದ್ದರು ಮುಖ್ಯೋಪಾಧ್ಯಾಯರಾದ ಶ್ರೀ ಕೆ.ಸುರೇಶ್ ರವರು ಸ್ವಾಗತಿಸಿದರು. ರವೀಶ ಕುಮಾರ್ ಧನ್ಯವಾದ ಸಮರ್ಪಿಸಿದರು ಮತ್ತು. ಕಾರ್ಯಕ್ರಮ ನಿರೂಪಿಸಿದರು.