ಉಜಿರೆ: ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆ ಉಜಿರೆಯಲ್ಲಿ ಸಪ್ಟೆಂಬರ್ 1 ರಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯಿಂದ ಮಾಹಿತಿ ಕಾರ್ಯಗಾರ ಪರಿಸರ ಸಂಘದ ವತಿಯಿಂದ ನಡೆಯಿತು.
ಇನೆಸ್ಪಕ್ಟರ್ ಶಾಂತಿಲಾಲ್ ಜಟ್ಟಿ NDRF ಬೆಂಗಳೂರು ಇವರು ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಕೆಲಸ ನಿರ್ವಹಣೆ ಮಾಡುತ್ತದೆ ಎಂದು ತಿಳಿಸಿದರು. ಹೆಡ್ ಕಾನ್ಸ್ಟೇಬಲ್ ಶಂಕರಪ್ಪ ಇದರ ಮುಖ್ಯ ಕರ್ತವ್ಯಗಳು ,ಭೂಕಂಪ, ನೆರೆ ಸುನಾಮಿ ಚಂಡಮಾರುತ ಅಗ್ವಿ ಅವಘಡ ಅಣುದುರಂತ, ತುರ್ತು ವೈದ್ಯಕೀಯ ನೆರವು, ವಿಪತ್ತು ಸಂಭವಿಸಿದ ಪ್ರದೇಶದಲ್ಲಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಚರಣೆ, ಇವುಗಳ ಬಗ್ಗೆ ಮಾಹಿತಿ ನೀಡಿದರು.
ಹೆಡ್ ಕಾನ್ಸ್ಟೇಬಲ್ಗಳಾದ CT ದಿವಕರ್ ರೆಡ್ಡಿ, CT ಅಲ್ಬಿನ್ , CT ಸತೀಶ್ ನಾಯ್ಕ್, CT ಸಿರಿಲಾಲ್ ಇವರುಗಳು ಯಾವ ರೀತಿ ಅಪಘಾತಗಳು ಸಂಭವಿಸಿದಾಗ ಮುನ್ನೇ಼ಚರಿಕೆ ಕ್ರಮವನ್ನು ಡೆಮೋ ಮಾಡಿ ತೋರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಮುಖ್ಯೋಪಾಧ್ಯಾಯರಾದ ಸುರೇಶ್ .ಕೆ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ಪ್ರಯೋಜನೆಗಳನ್ನು ವಿವರಿಸಿದರು
ಒಂಭತ್ತನೇ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು, ವಿದ್ಯಾರ್ಥಿಗಳಾದ ಮಾನ್ಯ ಸ್ವಾಗತಿಸಿರು, ರಕ್ಷಿತಾ ವಂದಿಸಿದರು, ಶ್ರುತಾ ಆಳ್ವ ಕಾರ್ಯಕ್ರಮ ನಿರೂಪಿಸಿದರು