ಕನ್ನಡ ಕೇವಲ ಭಾಷೆಯಲ್ಲ ,ಅದು ಆತ್ಮದ ನಾದ- ಭ. ಅನಿತಾ ಲಿಡಿಯ
ಕಿನ್ನಿಕಂಬಳ: ರೋಜಾ ಮಿಸ್ತಿಕಾ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡದ ಹಬ್ಬ ಸಾಂಸ್ಕೃತಿಕ ಕಾರ್ಯಕ್ರಮವು ವಿಜೃಂಭಣೆಯಿಂದ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲೆ ಭ. ಅನಿತಾ ಲಿಡಿಯ ಮಾತಾನಾಡುತ್ತಾ, ಕನ್ನಡಿಗರಾದ ನಾವು ಎಷ್ಟೇ ಎತ್ತರಕ್ಕೇರಿದರೂ ,ನಮ್ಮ ಹೃದಯದಲ್ಲಿ ಕನ್ನಡದ ಗೌರವ ಮತ್ತು ಭಾವನೆ ಸದಾ ಎತ್ತರದ ಸ್ಥಾನದಲ್ಲಿರಬೇಕು. ಕನ್ನಡ ಕೇವಲ ಭಾಷೆಯಲ್ಲ, ಅದು ಆತ್ಮದ ನಾದ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ನುಡಿದರು.
ಕನ್ನಡ ನಾಡಗೀತೆಯ ಶತಮಾನೋತ್ಸವದ ಸಂದರ್ಭದಲ್ಲಿ ನಾಡಗೀತೆಯನ್ನು ವಿದ್ಯಾರ್ಥಿಗಳೆಲ್ಲರೂ ಹಾಡಿದರು. ನಂತರ ಕನ್ನಡ ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕನ್ನಡ ನಾಡು ನುಡಿ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಂದ ಸುಂದರವಾದ ಸಾಂಸ್ಕೃತಿಕ ಕಾರ್ಯಕ್ರಮವು ನೆರವೇರಿತು. ಕನ್ನಡ ನಾಡು ನುಡಿಯ ಕುರಿತು ವಿದ್ಯಾರ್ಥಿ ನಿಶಾಂತ್ ದಿನದ ಮಹತ್ವವನ್ನು ತಿಳಿಸಿದರು.
ಉಪನ್ಯಾಸಕ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಸುಜಾತ ಸನಿಲ್ ಕಾರ್ಯಕ್ರಮವನ್ನು ಸಂಯೋಜಿಸಿದರು.ವಿದ್ಯಾರ್ಥಿ ಮಹಮ್ಮದ್ ಸಿಹಾಂ ಸ್ವಾಗತಿಸಿದರು, ವಿದ್ಯಾರ್ಥಿ ದಿಶಾನ್ ನಿರೂಪಿಸಿದರು.