ಸಾಮರ್ಥ್ಯದಲ್ಲಿ ನಂಬಿಕೆ , ಯಶಸ್ವಿಗೆ ದಾರಿ : ಭ.ಸಿಸಿಲಿಯಾ ಮೆಂಡೊನ್ಸ
ಕಿನ್ನಿಕಂಬಳ: ರೋಜಾ ಮಿಸ್ತಿಕಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಮಿಸ್ಟಿಕಲ್- 2025 ಕಾರ್ಯಕ್ರಮವು ವಿಜ್ರಂಭಣೆಯಿಂದ ಜರಗಿತು.
ಸಮಾರಂಭದ ಘನ ಅಧ್ಯಕ್ಷತೆಯನ್ನು ವಹಿಸಿದ್ದ ಬೆಥನಿ ಮಂಗಳೂರು ಪ್ರಾಂತ್ಯದ ಜೊತೆ ಕಾರ್ಯದರ್ಶಿ ಭ. ಸಿಸಿಲಿಯ ಮೆಂಡೊನ್ಸಾ ಮಾತನಾಡುತ್ತಾ, ಶಿಕ್ಷಣ ಕೇವಲ ಪ್ರಶಸ್ತಿಗೆ ಸೀಮಿತವಲ್ಲ, ಅದು ಮೌಲ್ಯವನ್ನು ಕಲಿಸುತ್ತದೆ. ನಿಮ್ಮ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟಾಗ ಯಶಸ್ಸಿನ ದಾರಿ ತೆರೆಯುತ್ತದೆ ಎಂದು ತಿಳಿಸಿದರು.
ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ಸಚಿತ್ರ ವರದಿಯ ಮೂಲಕ ಪ್ರಸ್ತುತಪಡಿಸಲಾಯಿತು. ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಗೌರವ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಡಾ ಇ ಕೆ ಇ ಸಿದ್ದಿಕ್ ಅಡ್ಡೂರು, ಸಂಚಾಲಕಿ ಭ. ರೋಸ್ ಲೀಟಾ, ಸ್ಥಳೀಯ ಮುಖ್ಯಸ್ಥೆ ಭ.ಲೀನ ಪಿರೇರ, ಖ್ಯಾತ ಹಿನ್ನೆಲೆ ಗಾಯಕಿ ಮಲ್ಲಿಕಾ ಮಟ್ಟಿ , ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ದೀಪಕ್ ಕೋಟ್ಯಾನ್ , ಪ್ರಾಂಶುಪಾಲೆ ಭ.ಅನಿತಾ ಲಿಡಿಯ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಮಿಸ್ಟಿಕಲ್ 2025 ಸಾಂಸ್ಕೃತಿಕ ಕಾರ್ಯಕ್ರಮವು ನೆರವೇರಿತು. ವಿದ್ಯಾರ್ಥಿನಿ ಮಾಶಿತಾ ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ನಿಯಾಫ್ ಫಾತಿಮಾ, ಅಪ್ಸ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ಮೊಹಮ್ಮದ್ ರಾಯಿಶ್ ವಂದಿಸಿದರು.