ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ – ಭ ಡಾ ಮಾರಿಯೋಲ
ಕಿನ್ನಿಕಂಬಳ: ರೋಸಾ ಮಿಸ್ತಿಕಾ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ಕಿನ್ನಿಗೋಳಿ ಲಿಟ್ಸ್ ಫ್ಲವರ್ ಪ್ರೌಢಶಾಲೆ ಇಲ್ಲಿ ಸಂಭ್ರಮದಿಂದ ನಡೆಯಿತು. ದೀಪ ಪ್ರಜ್ವಲಿಸುವುದರ ಮೂಲಕ ಅತಿಥಿವರೇಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆಯನ್ನು ನೀಡಿದರು.
ಉದ್ಘಾಟನಾ ಸಮಾರಂಭದ ಘನ ಅಧ್ಯಕ್ಷತೆಯನ್ನು ವಹಿಸಿದ್ದ ಬೆಥನಿ ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕರಾದ ವಂ.ಭ.ಮಾರಿಯೋಲ ಬಿ.ಎಸ್, ಮಾತನಾಡುತ್ತಾ, ಎನ್ ಎಸ್ ಎಸ್ ಶಿಬಿರವು ಸಮಾಜದಿಂದ ನಾನು ಏನು ಪಡೆಯಬಲ್ಲೆ ಎನ್ನುವುದಕ್ಕಿಂತ ನಾನು ಏನು ಕೊಡಬಲ್ಲೆ ಎಂಬ ಮಹತ್ವವನ್ನು ತಿಳಿಸುತ್ತದೆ ಶ್ರಮ ಮತ್ತು ಸೇವೆಯ ಮೂಲಕ ಸಮಾಜದಲ್ಲಿ ಇದ್ದುಕೊಂಡು ಸಮಾಜಕ್ಕೆ ಸೇವೆ ನೀಡುವುದರ ಜೊತೆಗೆ ನಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಲು ಸೂಕ್ತ ವೇದಿಕೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಶುಭ ಆಶೀರ್ವಚನಗೃದ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ನ ಮುಖ್ಯಸ್ಥರು ವಂ. ಸ್ವಾಮಿ ಲ್ಯಾನ್ಸಿ ಸಲ್ದಾನ್ಹ ಇವರು ಮಾತನಾಡುತ್ತಾ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಮತ್ತು ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ತಳಹದಿ ಎಂದು ತಿಳಿಸಿ, ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.
ಸಮಾರಂಭದಲ್ಲಿ ಭ ಡಾ ಲೊಲಿಟಾ ಪಿರೇರಾ ಮುಖ್ಯೋಪಾಧ್ಯಾಯಿನಿ ಲಿಟ್ಸ್ ಪ್ಲವರ್ ಪ್ರೌಢಶಾಲೆ ಕಿಣಿಗೋಳಿ, ಶ್ರೀ ಕೆ. ಭುವನಾಭಿರಾಮ ಉಡುಪ ಸಂಪಾದಕರು, ಯುಗಪುರುಷ ಕಿನ್ನಿಗೋಳಿ, ಶ್ರೀ ವಿಲಿಯಂ ಡಿಸೋಜ ಉಪಾಧ್ಯಕ್ಷರು ಪಾಲನಾ ಸಮಿತಿ ಕೊಸ್ಸೆಸ್ಟಾಂವ್ ಅಮ್ಮನವರ ದೇವಾಲಯ ಕಿನ್ನಿಗೋಳಿ, ಭ ಪ್ರೇಮಲತಾ ಬಿ ಎಸ್ ಮುಖ್ಯಸ್ಥರು ಮೇರಿವೆಲ್ ಕನ್ಯಾಮಠ ಕಿನ್ನಿಗೋಳಿ,ಭ ಡಾ ಡೋನಾ ಸಾಂಕ್ತಿಸ್ ಸಂಚಾಲಕರು ಲಿಟ್ಸ್ ಫ್ಲವರ್ ಪ್ರೌಢಶಾಲೆ ಕಿನ್ನಿಗೋಳಿ, ಭ ಲೀನಾ ಪಿರೇರಾ ಬಿಎಸ್ ಮುಖ್ಯಸ್ಥರು ರೋಸಾ ಮಿಸ್ತಿಕಾ ಕನ್ಯಾಮಠ ಕಿನ್ನಿ ಕಂಬಳ, ಭ ಮೋನಿಕಾ ರೆಬೆಲ್ಲೊ. ಮುಖ್ಯಸ್ಥರು ಲಿಟ್ಸ್ ಪ್ಲವರ್ ಪ್ರಾಥಮಿಕ ಶಾಲೆ, ಶ್ರೀಮತಿ ರೇಖಾ ಶೆಟ್ಟಿ ಅಧ್ಯಕ್ಷರು ಇನ್ನರ್ ವೀಲ್ ಕ್ಲಬ್ ಕಿನ್ನಿಗೋಳಿ, ಶ್ರೀ ದೀಪಕ್ ಕೋಟ್ಯಾನ್ ಉಪಾಧ್ಯಕ್ಷರು ರಕ್ಷಕ ಶಿಕ್ಷಕ ಸಂಘ, ಪ್ರಾಂಶುಪಾಲೆ ಭ ಅನಿತಾ ಲಿಡಿಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವೃಂದ ದವರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕಿ ಸುಜಾತ ಸನಿಲ್ ನೆರೆದಿರುವ ಸರ್ವರನ್ನು ಸ್ವಾಗತಿಸಿದರು.ಶಿಬಿರದ ಕಾರ್ಯಕ್ರಮಾಧಿಕಾರಿ ಶ್ರೀ ಅವಿಲ್ ಡಿಸಿಲ್ವಾ ನಿರೂಪಿಸಿ ಸಹ ಕಾರ್ಯಕ್ರಮಾಧಿಕಾರಿ ದೀಕ್ಷಾ ವಂದಿಸಿದರು.