ಸೇವೆಯಲ್ಲಿ ತೊಡಗಿಸಿಕೊಂಡಾಗ ನಿಜವಾದ ಜೀವನದ ಸಾರ್ಥಕತೆ -ಭ.ಡಾ ಲಿಲ್ಲಿ ಪಿರೇರಾ
ಕಿನ್ನಿಕಂಬಳ: ರೋಸಾ ಮಿಸ್ತಿಕಾ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರೌಢಶಾಲೆಯಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಥನಿ ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿ ಭ.ಡಾ. ಲಿಲ್ಲಿ ಪಿರೇರಾ ಸಭೆಯನ್ನುದ್ದೇಶಿಸಿ , ಎನ್ಎಸ್ಎಸ್ ಶಿಬಿರವು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅಮೂಲ್ಯ ವೇದಿಕೆಯಾಗಿದೆ. ಇದರಲ್ಲಿ ಪಡೆದ ಅನುಭವಗಳು ನಮ್ಮ ಭವಿಷ್ಯದ ಜೀವನ ಯಾತ್ರೆಗೆ ದಾರಿ ದೀಪವಾಗುತ್ತದೆ. ಸಮಾಜದಲ್ಲಿ ಸೇವೆಯ ಮೂಲಕ ತೊಡಗಿಸಿಕೊಂಡಾಗ ಜೀವನದ ನಿಜವಾದ ಸಾರ್ಥಕತೆಯ ಅನುಭವವಾಗುತ್ತದೆ ಎಂದು ತಿಳಿಸಿದರು.
ಕೊಸ್ಸೆಸ್ಸಾಂವ್ ಅಮ್ಮನವರ ದೇವಾಲಯ ಕಿನ್ನಿಗೋಳಿ ಇದರ ಧರ್ಮ ಗುರುಗಳಾದ ರೆ. ಫಾದರ್ ಜೋಕಿಂ ಫೆರ್ನಾಂಡಿಸ್ ಕಾರ್ಯಕ್ರಮಕ್ಕೆ ಆಶೀರ್ವಚನಗೈದರು.
ಸಮಾರಂಭದಲ್ಲಿ ಶ್ರೀ ಸುಧಾಕರ್ ಶಿಬರೂರು ಅಧ್ಯಕ್ಷರು ಲಯನ್ಸ್ ಕ್ಲಬ್ ಕಿನ್ನಿ ಗೋಳಿ, ಶ್ರೀ ಮಿಥುನ ಕೊಡೆತ್ತೂರು ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಮುಲ್ಕಿ, ಶ್ರೀ ಮೈಕಲ್ ಪಿಂಟೋ ಕಾರ್ಯದರ್ಶಿ ಕೊಸ್ಸೆಸ್ಸಾಂವ್ ಅಮ್ಮನವರ ದೇವಾಲಯ ಕಿನ್ನಿಗೋಳಿ , ಶ್ರೀಮತಿ ಉಷಾ ರಕ್ಷಕ ಶಿಕ್ಷಕ ಸಂಘ ,ರೋಸಾ ಮಿಸ್ತಿಕಾ ಪ.ಪೂ.ಕಾಲೇಜು,ಭ.ಅನಿತಾ ಲಿಡಿಯಾ ಪ್ರಾಂಶುಪಾಲರು ರೋಸಾ ಮಿಸ್ತಿಕಾ ಪ.ಪೂ.ಕಾಲೇಜು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ಉಪನ್ಯಾಸಕಿ ಅಶ್ವಿತಾ ನೆರೆದಿರುವ ಸರ್ವರನ್ನು ಸ್ವಾಗತಿಸಿದರು.ಶಿಬಿರದ ಕಾರ್ಯಕ್ರಮಾಧಿಕಾರಿ ಶ್ರೀ ಅವಿಲ್ ಡಿಸಿಲ್ವಾ ನಿರೂಪಿಸಿ ಶಿಬಿರಾರ್ಥಿ ನತಾಶಾ ವಂದಿಸಿದರು.