ಕಿನ್ನಿಕಂಬಳ: ರೋಸಾ ಮಿಸ್ತಿಕಾ ಪದವಿ ಪೂರ್ವ ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಪ್ರಾಂಶುಪಾಲೆ ಭ.ಅನಿತಾ ಲಿಡಿಯಾ ಮಾತನಾಡುತ್ತಾ,ಸ್ವಾತಂತ್ರ್ಯ ದಿನವು ದೇಶಕ್ಕೆ ಒದಗಿದ ಸ್ವಾತಂತ್ರ್ಯ ಮಾತ್ರವಲ್ಲ, ಉತ್ತಮ ನಡವಳಿಕೆಯ ಮೂಲಕ ಸಮಾಜದಲ್ಲಿರುವ ದುಶ್ಚಟಗಳ ವಿರುದ್ಧ ಹೋರಾಡಿ ಸುಧಾರಣೆ ತರುವ ಸ್ವಾತಂತ್ರ್ಯವಾಗಿದೆ ಎಂದು ತಿಳಿಸಿದರು.
ದೇಶ ಭಕ್ತಿಯನ್ನು ಸಾರುವ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರಿಮಾಶ್ ಸ್ವಾತಂತ್ರ ದಿನದ ಮಹತ್ವವನ್ನು ತಿಳಿಸಿದರು. ಉಪನ್ಯಾಸಕರಾದ ದೀಕ್ಷಾ ಮತ್ತು ರಶ್ಮಿ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿನಿಯರಾದ ನಿಯಾಫ್ ಫಾತಿಮಾ ನಿರೂಪಿಸಿದರು ಸಾನಿಯಾ ವಂದಿಸಿದರು.