ಕೈಕಂಬ, 29 ಅಕ್ಟೋಬರ್ 2025: ಕಿನ್ನಿಕಂಬಳದ ರೋಸಾ ಮಿಸ್ತಿಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನದ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮವು ಕಾಲೇಜಿನ ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ರೋಸಾ ಮಿಸ್ತಿಕಾ ಸಮೂಹ ಸಂಸ್ಥೆಯ ಸಂಚಾಲಕಿ ಭಗಿನಿ ರೋಸ್ ಲೀಟಾ ಮಾತನಾಡುತ್ತಾ , ಸಾಂಸ್ಕೃತಿಕ ಹಬ್ಬವು ವಿದ್ಯಾರ್ಥಿಗಳನ್ನು ಉತ್ಸಾಹಿಗಳಾಗಿ ಮಾಡುವುದಲ್ಲದೆ ಉತ್ತಮ ಮೌಲ್ಯಗಳನ್ನು ಕಲಿಸುತ್ತದೆ, ಈ ವೇದಿಕೆ ವಿದ್ಯಾರ್ಥಿಗಳ ಪ್ರತಿಭಾ ಅನಾವರಣಕ್ಕೆ ಅವಕಾಶ ಮಾಡಿ ಕೊಡುತ್ತದೆ ಎಂದರು.
ಮುಖ್ಯ ಅತಿಥಿ ಸಾಹಿತಿ, ಹಿನ್ನೆಲೆಗಾಯಕ ರೋನಿ ಕ್ರಾಸ್ತಾರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರತಿಭೆ ನಮ್ಮನ್ನು ಕರೆಯುವುದಿಲ್ಲ ,ಬದಲಾಗಿ ನಾವು ಪ್ರತಿಭೆಯನ್ನು ಹುಡುಕಿಕೊಂಡು ಹೋಗಬೇಕು, ಪ್ರತಿಭೆಯಿಂದ ಯಶಸ್ಸು ಸಾಧ್ಯ ಎಂದರು.
ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ದೀಪಕ್ ಕೋಟ್ಯಾನ್ ಶುಭ ಹಾರೈಸಿದರು,ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಜರಗಿತು.ಪ್ರಾಂಶುಪಾಲೆ ಭಗಿನಿ ಅನಿತಾ ಲಿಡಿಯಾ ಸ್ವಾಗತಿಸಿದರು. ಉಪನ್ಯಾಸಕ ಅವಿಲ್ ರೆನಿಲ್ ಡಿಸಿಲ್ವ ನಿರೂಪಿಸಿದರು. ವಿದ್ಯಾರ್ಥಿನಿ ಚಂದನಾ ವಂದಿಸಿದರು.