ಕಿನ್ನಿ ಕಂಬಳ: ರೋಸಾ ಮಿಸ್ತಿಕಾ ಪದವಿಪೂರ್ವ ಕಾಲೇಜು, ಕಿನ್ನಿ ಕಂಬಳದಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಅತಿಥಿ ಗಣ್ಯರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭ ಕಾಲೇಜಿನ ಸಂಚಾಲಕಿ ಭಗಿನಿ ರೋಸ್ ಲೀಟ ಬಿ.ಎಸ್. ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಕಠಿಣ ಪರಿಶ್ರಮದ ಹಾದಿ ಕಷ್ಟಕರವಾದರೂ ಅದರ ಪ್ರತಿಫಲವು ಸದಾ ಸಿಹಿಯಾಗಿರುತ್ತದೆ” ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು
ಸ್ನೇಹ ಸದನ ಸಂಸ್ಥೆಯ ನಿರ್ದೇಶಕರಾದ ವಂದನೀಯ ಸ್ವಾಮಿ ಸುನಿಲ್ ಜೋಸೆಫ್ ಎಂ.ಐ. ಅವರು ಆಶೀರ್ವಚನ ನೀಡುತ್ತಾ “ಕ್ರೀಡೆ ಜೀವನದ ಪಾಠಶಾಲೆಯಂತಿದೆ — ಗೆಲುವಿಗಿಂತಲೂ ಮುಖ್ಯವಾದುದು ಪರಸ್ಪರ ಗೌರವ ಮತ್ತು ಕ್ರೀಡಾ ಮನೋಭಾವ” ಎಂದು ಹೇಳಿದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಸೃಜನ್ ರವರ ಮಾರ್ಗದರ್ಶನದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಗುರುಪುರ ಹೋಬಳಿ ಮಟ್ಟದ ನೋಡಲ್ ಅಧಿಕಾರಿ ಮತ್ತು ರೋಸಾ ಮಿಸ್ತಿಕಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಲ್ಯಾನ್ಸಿ ಸಿಕ್ವೇರಾ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪಥಸಂಚಲನದ ಧ್ವಜ ಗೌರವ ಸ್ವೀಕರಿಸಿದರು. ಸಂಸ್ಥೆಗೆ ನೀಡಿದ ಅವರ ಅಮೂಲ್ಯ ಸೇವೆಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ತ್ರೋಬಾಲ್ ಕ್ರೀಡಾಪಟು ಶ್ರೀ ಅಬ್ದುಲ್ ಸಮದ್, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಹೆನ್ಸಿಟ ಡಿಕೋಸ್ಟ, ಹಾಗೂ ರೋಸಾ ಮಿಸ್ತಿಕಾ ಸಮೂಹ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಭಗಿನಿ ಅನಿತಾ ಲೀಡಿಯ ಬಿ.ಎಸ್. ಅವರು ಅತಿಥಿಗಳನ್ನು ಸ್ವಾಗತಿಸಿದರು.
ಉಪನ್ಯಾಸಕಿ ರಶ್ಮಿ ಅವರು ವಂದಿಸಿದರು, ಹಾಗೂ ಉಪನ್ಯಾಸಕಿ ಈಶರವರು ಕಾರ್ಯಕ್ರಮವನ್ನು ನಿರೂಪಿಸಿದರು.