ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ೭೬ನೇ ರ‍್ಷದ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್ ರವರು ರಾಷ್ಟ್ರಧ್ವಜಾರೋಹಣ ಮಾಡಿ ಮಾತನಾಡುತ್ತಾ “ರಾಷ್ಟ್ರದ ಅಖಂಡತೆಯನ್ನು ಕಾಪಾಡುವುದು ಭಾರತೀಯರೆಲ್ಲರ ಹೊಣೆ ಪ್ರತಿಯೊಬ್ಬರು ಸಂವಿಧಾನವನ್ನು ತಿಳಿದುಕೊಂಡು ರಾಷ್ಟ್ರದ ಅಭಿವೃದ್ಧಿಗಾಗಿ ಶ್ರಮಿಸಬೇಕು” ಎಂದು ಕರೆ ನೀಡಿದರು.

ಸುದಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ. ಸುಪ್ರೀತ್ ಕೆ ಸಿ, ಮುಖ್ಯ ಶಿಕ್ಷಕಿ ಶ್ರೀಮತಿ. ಶೋಭಾ ನಾಗರಾಜ್, ಶಾಲಾ ಆಡಳಿತ ಅಧಿಕಾರಿಗಳಾದ ಶ್ರೀಯುತ. ಸುಶಾಂತ್ ಹರ‍್ವಿನ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ. ಮನೋಹರ್ ಹಾಗೂ ರೆ. ರಮೇಶ್ ಡಿ ಮೂಡಲಗಿ ಬೆಳಗಾಂರವರು ಉಪಸ್ಥಿತರಿದ್ದು ಶುಭ ಹಾರೈಸಿದರು.
೧೦ನೇ ತರಗತಿ ವಿದ್ಯಾರ್ಥಿಗಳಾದ ಜೆರಿತ್ ಪಿ ಜೆ ಸ್ವಾಗತಿಸಿ, ಅಮೃತ ಡಿ ಎಲ್ ದಿನದ ಮಹತ್ವವನ್ನು ವಿವರಿಸಿ, ಧನ್ವಿಕ ಧನ್ಯವಾದವನ್ನರ್ಪಿಸಿ, ಫಾತಿಮ ಫಾರಿಜಾ ಕರ‍್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯರ‍್ಥಿಗಳಿಂದ ದೇಶಭಕ್ತಿ ಗೀತೆ ಗಾಯನವು ನಡೆಯಿತು. ಈ ಕಾರ್ಯಕ್ರಮವನ್ನು ಶಾಲೆಯ ಸೋಶಿಯಲ್ ಕ್ಲಬ್ ಜಾಗೃತಿ ಆಯೋಜಿಸಿತ್ತು.