ಮಂಗಳೂರು, 4 ಸೆಪ್ಟೆಂಬರ್ 2025: ರಾಣಿ ಅಬ್ಬಕ್ಕ 500 ನೇ ಜನ್ಮ ವರ್ಷಾ ಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ ಹಾಗು ಶ್ರೀ ದೇವಿ ಕಾಲೇಜ್ ಆಫ್ ಫ್ಯಾಷನ್ ಡಿಸೈನ್ ಸಹಯೋಗದಲ್ಲಿ 500 ಪ್ರೇರಣದಾಯಿ ಉಪನ್ಯಾಸ ಸರಣಿಯ ಮಂಗಳೂರು ವಿಭಾಗದ 100 ಉಪನ್ಯಾಸಗಳ ಸರಣಿಯ 62 ನೇ ಕಾರ್ಯಕ್ರಮ ಶ್ರೀ ದೇವಿ ಕಾಲೇಜ್ ಆಫ್ ಫ್ಯಾಷನ್ ಡಿಸೈನ್ ಬಳ್ಳಲ್ಬಗ್ ಮಂಗಳೂರು ಕಾಲೇಜಿನಲ್ಲಿ ಉದ್ಘಾಟಿಸಿ ಮಾತನಾಡಲಾಯಿತು.

ನಿವೃತ್ತ ಪ್ರಧಾಪ್ಯಕಿ ಡಾ| ಮೀನಾಕ್ಷಿ ರಾಮಚಂದ್ರ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿ ಇವತ್ತಿಗೂ ನೆನಪಿಸಿಕೊಳ್ಳುವ ರೀತಿಯ ಮಾದರಿ ಆಡಳಿತ ನಡೆಸಿದ ಅಬ್ಬಕ್ಕ ತನ್ನವರ ಕುಟೀಲತೆ ಇದ್ದರೂ ಆಕೆಯ ದೀರತನದ ಆಡಳಿತ ವೈಖರಿ ಸ್ಮರಣೀಯ ಎಂದರು.
ಶ್ರೀ ದೇವಿ ಕಾಲೇಜ್ ಆಫ್ ಫ್ಯಾಷನ್ ಡಿಸೈನ್ ಪ್ರಾಂಶುಪಾಲರಾದ ಡಾ| ಕಸ್ತೂರಿ ಜೆ ಶೆಟ್ಟಿ ಇವರು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ರಾಣಿ ಅಬ್ಬಕ್ಕಳ ಸ್ವಾಭಿಮಾನ ಧೈರ್ಯ ಮೈಗೂಡಿಸಬೇಕೆಂದರು.
ವೈಷ್ಣವಿ ಎಸ್ ನಿರೂಪಿಸಿದರು ,ಕಾರ್ಯಕ್ರಮ ಸಂಯೋಜಕರಾದ ಯಶ್ವಂತ್ ಕುದ್ರೋಳಿ ಸ್ವಾಗತಿಸಿದರು ಹಾಗು ಪ್ರಿಯ ವಂದಿಸಿದರು. ಸಹಾ ಶಿಕ್ಷಕರಾದ ಪ್ರಭಾ ಶೆಟ್ಟಿ ,ಸೌಜನ್ಯಾ ಆಚಾರ್ಯ ಹಾಗು ಶ್ರಿ ಸುಧೀರ್ ಶೆಟ್ಟಿ ಕಣ್ಣೂರು ಮಾಜಿ ಮಹಾ ಪೌರರು ಉಪಸ್ಥಿತರಿದ್ದರು.