ಪುತ್ತೂರು : ಮಂಗಳೂರಿನ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಆಗಸ್ಟ್ 8ರಂದು ನಡೆದ ವಿದ್ಯಾ ಭಾರತಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಅಂಬಿಕಾ ಸಿಬಿಎಸ್‌ಇ ವಿದ್ಯಾಸಂಸ್ಥೆಯ ಹತ್ತನೇ ತರಗತಿಯ ವಿದ್ಯಾರ್ಥಿ ವರ್ಧಿನ್ ದೀಪಕ್ ರೈ 17 ವರ್ಷ ಕೆಳಗಿನ ಹುಡುಗರ ವಿಭಾಗದ 50 ಮೀಟರ್ ಬಟರ್ ಪ್ರೈ, 100 ಮೀಟರ್ ಬ್ರೆಸ್ಟ್ ಸ್ಟೋಕ್, 50 ಮೀಟರ್ ಬ್ರೆಸ್ಟ್ ಸ್ಟೋಕ್‌ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಆರನೇ ತರಗತಿಯ ವಿದ್ಯಾರ್ಥಿ ಪ್ರತ್ಯುಷ್ ಎಲ್ ಎಸ್ ಗೌಡ 14 ವರ್ಷ ಕೆಳಗಿನ ಹುಡುಗರ ವಿಭಾಗದ 50ಮೀಟರ್ ಬಟರ್ ಪ್ರೈ ಮತ್ತು 50 ಮೀಟರ್ ಫ್ರೀ ಸ್ಟೈಲ್‌ನಲ್ಲಿ ದ್ವಿತೀಯ ಸ್ಥಾನ, 50ಮೀಟರ್ ಬ್ಯಾಕ್ ಸ್ಟೋಕ್ ಮತ್ತು 4×100 ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಎಂಟನೇ ತರಗತಿಯ ವಿದ್ಯಾರ್ಥಿನಿ ಮಹೆಕ್ ರವಿಕುಮಾರ್ ಕೊತಾರಿ 14 ವರ್ಷ ಕೆಳಗಿನ ಹುಡುಗಿಯರ ವಿಭಾಗದ 50 ಮೀಟರ್ ಬ್ರೆಸ್ಟ್ ಸ್ಟೋಕ್ ಮತ್ತು 50 ಮೀಟರ್ ಬ್ಯಾಕ್ ಸ್ಟೋಕ್‌ನಲ್ಲಿ ತೃತೀಯ ಸ್ಥಾನವನ್ನು, 100 ಮೀಟರ್ ಬ್ಯಾಕ್ ಸ್ಟೋಕ್‌ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.ಎಂಟನೇ ತರಗತಿಯ ವಿದ್ಯಾರ್ಥಿ ಲಲನ್ ಯು ನಾಯ್ಕ 14 ವರ್ಷ ಕೆಳಗಿನ ಹುಡುಗರ ವಿಭಾಗದ 100 ಮೀಟರ್ ಫ್ರೀ ಸ್ಟೈಲ್ ನಲ್ಲಿ ದ್ವಿತೀಯ ಸ್ಥಾನವನ್ನು 4×100 ಫ್ರೀ ಸ್ಟೈಲ್ ರಿಲೇಯಲ್ಲಿ ಪ್ರಥಮ ಸ್ಥಾನವನ್ನು, 50 ಮೀಟರ್ ಬ್ಯಾಕ್ ಸ್ಟೋಕ್‌ನಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಆರನೇ ತರಗತಿಯ ವಿದ್ಯಾರ್ಥಿ ದೀಪಾಂಶ್ ಶೆಟ್ಟಿ 14 ವರ್ಷಕೆಳಗಿನ ಹುಡುಗರ ವಿಭಾಗದ 4×100 ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.