ಪುತ್ತೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯತ್ ಪುತ್ತೂರು, ನಗರ ಸಭೆ, ಪುತ್ತೂರು, ತಾಲೂಕು ಯುವಜನ ಒಕ್ಕೂಟ(ರಿ) ಪುತ್ತೂರು ಅಶ್ವತ್ದ ಕಟ್ಟೆ ದೇವತಾ ಸಮಿತಿ(ರಿ) ಯರ್ಮುಂಜಪಳ್ಳ ಪಡ್ನೂರು ಶ್ರೀ ಧೂಮಾವತಿ ಯುವಕ ಮಂಡಲ (ರಿ) ಜುಮಾದಿಪಲ್ಕೆ, ಪಡ್ನೂರು ಸಂತ ಫಿಲೋಮಿನಾ ಕಾಲೇಜು ಪುತ್ತೂರು ಮತ್ತು ಸ.ಪ.ಪೂ ಕಾಲೇಜು ಕೊಂಬೆಟ್ಟು ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದಿರುವ ಪುತ್ತೂರು ತಾಲೂಕು ದಸರಾ ಕ್ರೀಡಾಕೂಟ(2024-25) ದಲ್ಲಿ ಅಂಬಿಕಾ ಸಿ ಬಿ ಎಸ್ ಇ ವಿದ್ಯಾಲಯ , ಬಪ್ಪಳಿಗೆ, ಪುತ್ತೂರು ಇಲ್ಲಿನ ವಿದ್ಯಾರ್ಥಿಗಳು ಪ್ರತೀ ವರ್ಷದಂತೆ ಈ ವರ್ಷವೂ ಅತೀ ಉತ್ಸಾಹದಿಂದ ಕ್ರೀಡೆಯಲ್ಲಿ ಪಾಲ್ಗೊಂಡು ವಿಜೇತರಾಗಿ ಬಹುಮಾನ ವನ್ನ ಪಡೆದಿರುತ್ತಾರೆ.
8ನೇ ತರಗತಿಯ ವಿದ್ಯಾರ್ಥಿನಿ, ದೃಶಾನ ಎಸ್ ಸರಳಿಕಾನ (ಸುರೇಶ್ ಗೌಡ ಎಸ್ ಹಾಗೂ ವಿದ್ಯಾಶ್ರಿ ಇವರ ಮಗಳು)100 ಮೀ ಓಟದಲ್ಲಿ ಬೆಳ್ಳಿ, 200 ಮೀ ಓಟಟದಲ್ಲಿ ಚಿನ್ನ ಹಾಗೂ4*100 ರಿಲೇಯಲ್ಲಿ ಬೆಳ್ಳಿಯ ಪದಕವನ್ನ ಪಡೆದಿರುತ್ತಾಳೆ. 10ನೇ ತರಗತಿಯ ಹಿತಾಲಿ ಪಿ ಶೆಟ್ಟಿ (ಪ್ರಸನ್ನ ಶೆಟ್ಟಿ ಹಾಗೂ ಪ್ರತಿಮಾ ಶೆಟ್ಟಿ ಇವರ ಮಗಳು) ಚಕ್ರ ಎಸೆತದಲ್ಲಿ ಕಂಚಿನ ಪದಕವನ್ನ ಪಡೆದಿರುತ್ತಾಳೆ. 9ನೇ ತರಗತಿಯ ತನ್ವಿ ಎ ರೈ (ಅನಿಲ್ ರೈ ಹಾಗೂ ಚೈತ್ರ ರೈ ಇವರ ಮಗಳು), ಪೂರ್ವಿ ವಿ(ವಿನಯ್ ಕುಮಾರ್ ಹಾಗೂ ಪವಿತ್ರ ಎಂಎಸ್ ಇವರ ಮಗಳು),ಬಿ ತ್ರಿಶಾ(ಜನಾರ್ಧನ್ ಹಾಗೂ ಶಾರದಾ ಇವರ ಮಗಳು), ಹಾಗೂ ದ್ರಿಶಾನ ಎಸ್ ಸರಳಿಕಾನ ಇವರು 4*100 ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. 9ನೇ ತರಗತಿಯ ರಕ್ಷಾ ಎಸ್ ಎಸ್(ಶ್ರೀದರ ಎಸ್ ಮತ್ತು ಚಂದ್ರಾವತಿ ಎಂ ಇವರ ಮಗಳು), ಮನಸ್ವಿ ಎಸ್ ಪಿ (ಪಿ ಸೀತಾರಾಮ ಗೌಡ ಹಾಗೂ ಶೋಭಾ ಇವರ ಮಗಳು), ಅದಿತಿ ಶೆಟ್ಟಿ (ನವೀನ್ ಶೆಟ್ಟಿ ಹಾಗೂ ವಿಜಯಾ ಎನ್ ಇವರ ಮಗಳು) ಹಾಗೂ ಪೂರ್ವಿ ವಿ 4*400 ಮೀ ರಿಲೇ ಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.8ನೇ ತರಗತಿಯ ಬಿ ತ್ರಿಶಾ 400 ಮೀ ಓಟದಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಶಾಲಾ ದೈಹಿಕ ಶಿಕ್ಷಕರಾದ ಶ್ರೀಮತಿ ಸುಚಿತ್ರ ಪಿ ಶೆಟ್ಟಿ ಹಾಗೂ ಸಂತೋಷ್ ಕುಮಾರ್ ಎನ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ ಎಂದು ಶಾಲಾ ಪ್ರಕಟನೆ ತಿಳಿಸಿದೆ.