ಅಜಿಲಮೊಗರು, ಆಗಸ್ಟ್ 29, 2024 : ಕರ್ನಾಟಕ ಸರಕಾರ ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ಉಳಿ,ತ್ರ ಇವರ ಸಹಯೋಗದಲ್ಲಿ ದಕ್ಷಿಣ ಕನ್ನಡ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಕುಟ್ಟಿಕಳ ಅಜಿಲಮೊಗರಿನಲ್ಲಿ ನಡೆದ 2024-25ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಕಿರಿಯ ವಿಭಾಗದಲ್ಲಿ ನಾಲ್ಕು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಮೂರು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಹಾಗೂ ಹಿರಿಯ ವಿಭಾಗದಲ್ಲಿ ಆರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಐದು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಮತ್ತು ಎರಡು ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದು ವಿದ್ಯಾಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ

ಕಿರಿಯ ವಿಭಾಗದಲ್ಲಿ ಇಂಗ್ಲಿಷ್ ಕಂಠಪಾಠ ಅಮೃತ ಪ್ರಭು, ದೇಶಭಕ್ತಿ ಗೀತೆ ನಿಹಾ ಶಿವಾನಿ ಶೆಟ್ಟಿ ,ಭಕ್ತಿ ಗೀತೆ ಶಮನಿ ಆರ್ ಆಚಾರ್ಯ, ಆಶುಭಾಷಣ ದನ್ವಿ ಪಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಧಾರ್ಮಿಕ ಪಠಣ ಸಂಸ್ಕೃತ ನಿಧಿ ,ಛದ್ಮವೇಷ ಶಿವಪ್ರಿಯ ಶೆಟ್ಟಿ, ಕ್ಲೇ ಮಾಡ್ಲಿಂಗ್ ನಿಶ್ಮಾ ಎಸ್ ಕೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ
ಹಿರಿಯ ವಿಭಾಗದಲ್ಲಿ ಇಂಗ್ಲಿಷ್ ಕಂಠಪಾಠ ಜೀವಿತ್ ಎ, ದೇಶಭಕ್ತಿ ಗೀತೆ ನಮನ್ ಸಿ ಶೆಟ್ಟಿ, ಭಕ್ತಿಗೀತೆ ಸಮನ್ವಿ, ಆಶುಭಾಷಣ ನಿರೀಕ್ಷಾ ಎ, ಕವನ ವಾಚನ ದಾನ್ವಿ ವೈ ಕುಮಾರಿ, ಮಿಮಿಕ್ರಿ ಮೋದಕ್ ಕುಂದರ್ ಎಂ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ದ್ವಿತೀಯ ಸ್ಥಾನವನ್ನು ಹಿಂದಿ ಕಂಠಪಾಠ ಮೊಹಮ್ಮದ್ ಅಝೀಮ್, ಪ್ರಬಂಧ ರಚನೆ ವೇನಿದ್ಯ ಎ, ಕಥೆ ಹೇಳುವುದು ಹಿಬಾ ಫಾತಿಮಾ, ಚಿತ್ರಕಲೆ ಕೆ ಪ್ರತ್ಯುಷ್ ಆಚಾರ್ಯ, ಅಭಿನಯ ಗೀತೆ ಜೀವಲ್ ಟಿ ಪಿ ಹಾಗೂ ಧಾರ್ಮಿಕ ಪಠಣ ಸಂಸ್ಕೃತ ಅಮೃತ, ಕ್ಲೇ ಮಾಡ್ಲಿಂಗ್ ವಿಧಿಶ್ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.