ಕಕ್ಯಪದವು, ಆಗಸ್ಟ್ 12, 2024 : ದಿನಾಂಕ 12/08/2024 ರಂದು 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಾಗೂ ನಶಾಮುಕ್ತ ಭಾರತ ಅಭಿಯಾನ ಪ್ರಾರಂಭವಾಗಿ 5ನೇ ವರ್ಷದ ಅವಧಿಗೆ ಬರುತ್ತಿರುವುದರಿಂದ ನಶಾಮುಕ್ತ ಭಾರತ ಅಭಿಯಾನ ಯೋಜನೆಯಡಿ ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಮಾದಕ ವಸ್ತು ಸೇವನೆ ಮಾಡದಿರಲು ಪ್ರತಿಜ್ಞೆ ಸ್ವೀಕರಿಸಲಾಯಿತು.

ವಿದ್ಯಾಸಂಸ್ಥೆಯ ಸಂಯೋಜಕರಾದ ಶ್ರೀಯುತ ಯಶವಂತ್ ಜಿ ನಾಯಕ್, ಪದವಿ ವಿಭಾಗದ ಮುಖ್ಯಸ್ಥೆಯಾದ ಶ್ರೀಮತಿ ದೀಕ್ಷಿತಾ , ಪದವಿ ಪೂರ್ವ ವಿಭಾಗದ ಮುಖ್ಯಸ್ಥೆಯಾದ ಶ್ರೀಮತಿ ಸೌಮ್ಯ ಎನ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಶ್ರೀಮತಿ ವಿಂದ್ಯಾಶ್ರೀ ಪ್ರತಿಜ್ಞಾ ವಿಧಿಯನ್ನು ನಡೆಸಿಕೊಟ್ಟರು.