ಬಜಿಪೆ, 21 ನವೆಂಬರ್ 2025: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಮಂಗಳೂರು ಗ್ರಾಮಾಂತರ, ಬಾಲವಿಕಾಸ ಸಮಿತಿ ಪೆರ್ಮುದೆ ಅಂಗನವಾಡಿ ಕೇಂದ್ರ ಹಾಗೂ ಇತರ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಪೆರ್ಮುದೆ ಅಂಗನ ವಾಡಿಯಲ್ಲಿ ಮಕ್ಕಳ ದಿನಾಚರಣೆ ನಡೆಯಿತು.
ಕಾರ್ಯಕ್ರಮವನ್ನು ಮಾಜಿ ಸೈನಿಕ ಮೋಹನದಾಸ ಉದ್ಘಾಟಿಸಿದರು. ವಲಯ ಮೇಲ್ವಿಚಾರಕಿ ಕಲ್ಪನಾ ಪೂಜಾರಿ ಪ್ರಸ್ತಾವಿಸಿದರು. ಮುಖ್ಯ ಅತಿಥಿಯಾಗಿ ಸಮುದಾಯ ಆರೋಗ್ಯ ಅಧಿಕಾರಿ ಮಹೇಶ್ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಮಹಾಲಕ್ಷ್ಮೀ ಮಕ್ಕಳ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಂಗನವಾಡಿ ಕೇಂದ್ರದ ಪುಟಾಣಿ ಫಾತಿಮಾ ಷಹನಾಝ್ ಅಧ್ಯಕ್ಷತೆ ವಹಿಸಿ ಗಮನ ಸೆಳೆದಳು.
ರಾಘವೇಂದ್ರ ಶೆಟ್ಟಿಗಾರ್, ಬಾಲವಿಕಾಸ ಸಮಿತಿ ಅಧ್ಯಕ್ಷೆ ಲೀಲಾ, ಆಶಾ ಕಾರ್ಯಕರ್ತೆ ಕಲ್ಯಾಣಿ ಇದ್ದರು. ಸಹಾಯಕಿ ದೀಕ್ಷಿತಾ ನಾಗೇಶ್ ಸ್ವಾಗತಿಸಿ, ಇಂದಿರಾ ಮೋಹನ್‌ದಾಸ ನಿರೂಪಿಸಿ, ಶಿಕ್ಷಕಿ ವಿಜಯಲಕ್ಷ್ಮೀ ಬಾಲಕೃಷ್ಣ ಶೆಟ್ಟಿಗಾರ್ ವಂದಿಸಿದರು.