ಉಳ್ಳಾಲ: ರಾಜ್ಯ ಶಿಕ್ಷಣ ಇಲಾಖೆ ವತಿಯಿಂದ 2024-25 ನೇ ಸಾಲಿನ ಪದವಿಪೂರ್ವ ಕಾಲೇಜು ಗಳ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿ ಇದೇ ಬರುವ ದಿನಾಂಕ 29,30 ರಂದು ಬಳ್ಳಾರಿಯಲ್ಲಿ ನಡೆಯಲಿದ್ದು, ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ದಕ್ಷಿಣ ಕನ್ನಡ ಜಿಲ್ಲಾ ತಂಡದಲ್ಲಿ ಆಡಲು ಪ್ರಪ್ರಥಮ ಬಾರಿ ಉಳ್ಳಾಲ ತಾಲೂಕಿನಿಂದ ಪ್ರತಿಷ್ಠಿತ ಪಾ0ಡ್ಯರಾಜ್ ಬಲ್ಲಾಲ್ ಪದವಿಪೂರ್ವ ಕಾಲೇಜಿನ ಹಲೀಮಾ ಸಲ್ವ ಹಾಗೂ ಖತೀಜತುಲ್ ಮಿನ್ಹಾ ಈ ಎರಡು ಪ್ರತಿಭಾವಂತ ಫುಟ್ಬಾಲ್ ಆಟಗಾರ್ತಿಯರು ಸ್ಥಾನ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಗುಣಮಟ್ಟದ ಶಿಕ್ಷಣಕ್ಕೆ (quality education ) ಹೆಸರುವಾಸಿ ಯಾಗಿರುವ ಪಾಂಡ್ಯರಾಜ್ ಬಲ್ಲಾಲ್ ಪದವಿಪೂರ್ವ ಕಾಲೇಜು ಇದರ ಕೋಚ್ ತಮೀಮ್ ಉಳ್ಳಾಲ್ ರವರ ತರಬೇತಿಯಿಂದ ಕ್ರೀಡೆಯಲ್ಲಿ ಈಗಾಗಲೇ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಕಾಲೇಜಿಗೆ ತಂದು ಕೊಟ್ಟಿದ್ದಾರೆ.
ಇದೀಗ ಫುಟ್ಬಾಲ್ ನಲ್ಲಿ ಹೆಣ್ಣು ಮಕ್ಕಳಿಗೂ ಉತ್ತಮವಾದ ತರಬೇತಿ ನೀಡಿ ಉಳ್ಳಾಲ ತಾಲೂಕು ಕಾಲೇಜ್ ಹೆಣ್ಣುಮಕ್ಕಳು ಮೊದಲ ಬಾರಿ ಜಿಲ್ಲಾ ಫುಟ್ಬಾಲ್ ತಂಡಕ್ಕೆ ಆಯ್ಕೆ ಆಗುವಂತೆ ಮಾಡಿ ಉಳ್ಳಾಲ ತಾಲೂಕು ಹಾಗೂ ಪಾ0ಡ್ಯರಾಜ್ ಬಲ್ಲಾಲ್ ವಿದ್ಯಾ ಸಂಸ್ಥೆಗೆ ತಮೀಮ್ ಉಳ್ಳಾಲ್ ಕೀರ್ತಿ ತಂದು ಕೊಟ್ಟಿದ್ದಾರೆ.
ಇಂತಹ ಕಾಲೇಜಿನಲ್ಲಿ ಇರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸರಿಯಾದ ತರಬೇತಿ ನೀಡುವಲ್ಲಿ ಕಾಲೇಜಿನ ಆಡಳಿತ ಟ್ರಸ್ಟಿಡಾ. ಪ್ರಿಯ ಬಲ್ಲಾಳ್ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶರ್ಮಿಳ ಮುಖೇಶ್ ರಾವ್, ಶಿಕ್ಷಕ ವರ್ಗದವರು ಸದಾ ಮುಂದಿರುತ್ತಾರೆ. ಹಾಗೂ ಇಂತಹ ವಿದ್ಯಾರ್ಥಿಗಳಿಗೆ ಇವರುಗಳು ಸದಾ ಪ್ರೋತ್ಸಾಹವನ್ನು ನೀಡುತ್ತಿರುತ್ತಾರೆ.