ಉಳ್ಳಾಲ, 15 ಆಗಸ್ಟ್ 2025: ಕೆ. ಪಾಂಡ್ಯರಾಜ್ ಬಲ್ಲಾಳ್ ಪದವಿ ಪೂರ್ವ ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಘನತೆ ಮತ್ತು ಗೌರವದಿಂದ ಆಚರಿಸಲಾಯಿತು.
ಬೆಳಿಗ್ಗೆ 9.30 ಕ್ಕೆ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಕರು – ಸಿಬ್ಬಂದಿ ವರ್ಗ ಹಾಗೂ ಕೆ .ಪಾಂಡ್ಯರಾಜ್ ಬಲ್ಲಾಳ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿಗಳು ಕಾಲೇಜಿನ ಕ್ರೀಡಾಂಗಣದಲ್ಲಿ ಸೇರಿದ್ದು, ಕಾಲೇಜಿನ ಆವರಣವನ್ನು ತ್ರಿವರ್ಣ ಬಣ್ಣದ ಕರಕುಶಲಗಳಿಂದ ಮಾಡಿದ ಹೂವುಗಳಿಂದ ಅಲಂಕರಿಸಿದ್ದರು .
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ.ಪಾಂಡ್ಯರಾಜ್ ಬಲ್ಲಾಳ್ ಸಮೂಹ ಸಂಸ್ಥೆಗಳ ಆಡಳಿತ ಟ್ರಸ್ಟಿ ಡಾ.ಪ್ರಿಯಾ ಬಲ್ಲಾಳ್ ಕೆ ರವರು ಧ್ವಜಾರೋಹಣ ಮಾಡಿದರು. ವಿದ್ಯಾರ್ಥಿಗಳು ಭಾರತದ ವಿವಿಧತೆಯಲ್ಲಿ ಏಕತೆ ಎನ್ನುವ ಸಂದೇಶವನ್ನು ಇಟ್ಟುಕೊಂಡು ಭಾರತದ ಪ್ರತಿಯೊಂದು ರಾಜ್ಯವನ್ನು ಗುರುತಿಸಿಕೊಂಡು ಅಲ್ಲಿಯ ವಿವಿಧ ಬಗೆಯ ಬಟ್ಟೆಯನ್ನು ತೊಟ್ಟು ಅಲ್ಲಿಯ ನೃತ್ಯವನ್ನು ಮಾಡುವುದರ ಜೊತೆಗೆ ಭಾರತದಲ್ಲಿ ಹಲವು ಭಾಷೆಗಳು, ಧರ್ಮಗಳು, ಮತ್ತು ಸಂಸ್ಕೃತಿಗಳಿದ್ದರೂ, ಎಲ್ಲರೂ ಒಟ್ಟಾಗಿ ಬದುಕುತ್ತೇವೆ ಮತ್ತು ರಾಷ್ಟ್ರಕ್ಕಾಗಿ ಒಂದಾಗಿ ಕೆಲಸ ಮಾಡುತ್ತೇವೆ ಎಂಬುದನ್ನು ಜೋರಾಗಿ ಕೂಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಆಡಳಿತ ಟ್ರಸ್ಟಿಯಾದ ಡಾ. ಪ್ರಿಯಾ ಬಲ್ಲಾಳ್ ಕೆ ರವರು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ನಮ್ಮ ದೇಶವನ್ನು ಕಾಯುವ ಸೈನಿಕರ ಮಹತ್ವವನ್ನು ತಿಳಿಸಿಕೊಟ್ಟು ಅವರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕೆ ಪಾಂಡ್ಯರಾಜ್ ಬಲ್ಲಾಳ್ ಸಮೂಹ ಸಂಸ್ಥೆಗಳ ಆಡಳಿತ ಪ್ರತಿನಿಧಿಯಾದ ಶ್ರೀ ಇಶಾನ್ ಬಲ್ಲಾಳ್ ರವರು, ಕೆ ಪಾಂಡ್ಯ ರಾಜ್ ಬಲ್ಲಾಳ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶರ್ಮಿಳ ಮುಖೇಶ್ ರಾವ್, ಕೆ. ಪಾಂಡ್ಯರಾಜ್ ಬಲ್ಲಾಳ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸೋನಿಯಾ ಸೆಬ್ಯಾಸ್ಟಿನ್ ರವರು ಹಾಗೂ ಸಂಸ್ಥೆಗಳ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಜುಮೈಮ ಹಾಗೂ ಸಲ್ವಾನ ನಿರೂಪಿಸಿದರೆ, ಖತೀಜ ಅನ್ಹರ್ ಸ್ವಾಗತಿಸಿದರು. ವಿದ್ಯಾರ್ಥಿನಿಯಾದ ನಫೀಜಾ ಇಷ್ಕ ವಂದಿಸಿದರು.