ಮೊಂಟೆಪದವು, 19 ಆಗಸ್ಟ್ 2025: ಸರಕಾರಿ ಪದವಿಪೂರ್ವ ಕಾಲೇಜು ಮೊಂಟೆ ಪದವು ಇಲ್ಲಿ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ದ.ಕ.ಜಿಲ್ಲೆ ಮಂಗಳೂರು, ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಉಳ್ಳಾಲ ತಾಲೂಕು ಮಟ್ಟದ ಕ್ರೀಡಾ ಕೂಟ 2025-26 ಪದವಿ ಪೂರ್ವ ವಿದ್ಯಾರ್ಥಿಗಳ ಹುಡುಗರ ಫುಟ್ಬಾಲ್ ಪಂದ್ಯಾಟದಲ್ಲಿ ಕೆ. ಪಾಂಡ್ಯ ರಾಜ್ ಬಲ್ಲಾಳ್ ಪದವಿ ಪೂರ್ವ ಕಾಲೇಜಿನ ತಂಡವು ಟಿಪ್ಪು ಸುಲ್ತಾನ್ ಪದವಿ ಪೂರ್ವ ಕಾಲೇಜಿನ ತಂಡವನ್ನು 1-0 ಅಂತರದಲ್ಲಿ ಹಿಂದಿಕ್ಕಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾದ ಸುಹೇಲ್ ಅಹಮದ್ ಫಾರಿಷ್ ಟೂರ್ನಿಯಾ ಅತ್ಯುತ್ತಮ ಸ್ಟ್ರೈಕರ್ ಪ್ರಶಸ್ತಿಯನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ .
ಕಾಲೇಜಿನ ರಾಷ್ಟ್ರಮಟ್ಟದ ಫುಟ್ಬಾಲ್ ತಂಡದ ಕೋಚ್ ಆಗಿರುವಂತಹ, ಯು. ಎಂ ತಮೀಮ್ ಉಳ್ಳಾಲ್ ರವರ ನೇತೃತ್ವದಲ್ಲಿ ಈ ತಂಡವು ತರಬೇತಿಯನ್ನು ಪಡೆದಿದ್ದು, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಮೊಹಮದ್ ಹೂನೈನ್ ಈ ತಂಡವನ್ನು ಮುನ್ನಡೆಸಿರುತ್ತಾರೆ .
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ- ಶಿಕ್ಷಕೇತರ ವೃಂದದವರು ಅಭಿನಂದಿಸಿ ಶುಭ ಹಾರೈಸಿದರು.