ಉಳ್ಳಾಲ: ಉತ್ತಮ ಗುಣಮಟ್ಟದ ಶಿಕ್ಷಣದ (good quality education) ಮೂಲಕ ಪ್ರತೀ ವರ್ಷ ಹೊಸ ದಾಖಲಾತಿಯನ್ನು ಹೆಚ್ಚಿಸುವೂದ ರೊಂದಿಗೆ ಉತ್ತಮ ಶಿಕ್ಷಣ ಸಂಸ್ಥೆ ಎಂದು ಈಗಾಗಲೇ ಹೆಸರು ಮಾಡಿ ಕೊಂಡು, ಮುಂದಿನ ವರ್ಷಕ್ಕೆ ಡಿಗ್ರಿ ಕಾಲೇಜು ಆರಂಭಿಸಲು ಸಜ್ಜಾಗಿರುವ ಉಳ್ಳಾಲ ತಾಲೂಕಿನ ಪ್ರತಿಷ್ಠಿತ ಕೆ. ಪಾಂಡ್ಯರಾಜ್ ಬಲ್ಲಾಳ್ ಪದವಿಪೂರ್ವ ಕಾಲೇಜು ಇದೀಗ ಕೋಚ್ ತಮೀಮ್ ಉಳ್ಳಾಲರ ಕರಾರುವಕ್ಕಾದ ತರಬೇತಿ ಹಾಗೂ ಆಡಳಿತ ಮಂಡಳಿ ಮತ್ತು ಕಾಲೇಜಿನ ಪ್ರಾಂಶುಪಾಲೆ ಶರ್ಮಿಳಾ ಮುಖೇಶ್ ರಾವ್ ಇವರ ಪ್ರೋತ್ಸಾಹ ದಿಂದ ಇಲ್ಲಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ಪೋರ್ಟ್ಸ್ ನಲ್ಲಿಯೂ ಗಣನೀಯ ಸಾಧನೆ ಮಾಡಿ ಕಾಲೇಜು ಹಾಗೂ ತಾಲೂಕಿಗೆ ಕೀರ್ತಿ ತಂದು ಕೊಡುತ್ತಿದ್ದಾರೆ.
ಕ್ರೀಡೆಯಲ್ಲಿ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಬಾಚಿ ಕೊಂಡಿರುವ ಪಾಂಡ್ಯರಾಜ್ ಬಲ್ಲಾಳ್ ಪದವಿ ಪೂರ್ವ ಕಾಲೇಜಿನ 13 ವಿದ್ಯಾರ್ಥಿಗಳು ಇದೀಗ ತಾಲೂಕು ಮಟ್ಟದಲ್ಲಿ ನಡೆದ ಅಥ್ಲೆಟಿಕ್ಸ್ ಮೀಟ್ ನಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ ಮತ್ತು ಇವರು ಮುಂದಿನ ನವೆಂಬರ್ ತಿಂಗಳಿನಲ್ಲಿ ಆಳ್ವಾಸ್ ಕಾಲೇಜಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಮೀಟ್ಸ್ ನಲ್ಲಿ ಉಳ್ಳಾಲ ತಾಲೂಕನ್ನು ಪ್ರತಿನಿಧಿಸಲಿದ್ದಾರೆ.
ಇಲ್ಲಿನ ಹುಡುಗಿಯರು ಕೂಡ ಸ್ಪೋರ್ಟ್ಸ್ ನಲ್ಲಿ ಹುಡುಗರಿಗೆ ಸರಿ ಸಮಾನವಾಗಿದ್ದು ಕೊಂಡು ಕಬಡ್ಡಿ, ವಾಲಿಬಾಲ್, ಫುಟ್ಬಾಲ್, ಅಥ್ಲೆಟಿಕ್ಸ್, ಖೋ ಖೋ ದಲ್ಲಿಯೂ ಚಾಂಪಿಯನ್ ಆಗಿದ್ದಾರೆ.
ಇದೀಗ ಪಾಂಡ್ಯರಾಜ್ ಬಲ್ಲಾಳ್ ಪದವಿ ಪೂರ್ವ ಕಾಲೇಜಿನ ಇಬ್ಬರು ಪ್ರತಿಭಾವಂತ ಫುಟ್ಬಾಲ್ ಆಟಗಾರ್ತಿಯರಾದ ಹಲೀಮಾ ಸಲ್ವಾ ಹಾಗೂ ಕತೀಜಾತುಲ್ ಮಿನ್ಹ ಮುಂದಿನ ನವೆಂಬರ್ ತಿಂಗಳು ಬಳ್ಳಾರಿಯಲ್ಲಿ ನಡೆಯುವ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.