ಮಂಗಳೂರು : ಶ್ರೀ ದೇವಿ ಕಾಲೇಜ್ ಆಫ್ ಫ್ಯಾಷನ್ ಡಿಸೈನ್ ಬಲ್ಲಾಳ್ಭಾಗ್ ಮಂಗಳೂರು ಇವರ ವತಿಯಿಂದ ಓಣಂ ಹಬ್ಬದ ಆಚರಣೆಯನ್ನು ಕಾಲೇಜಿನ ಆವರಣದಲ್ಲಿ ಬಹಳ ಆದ್ಧೂರಿಯಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ಟಿ ಕೆ ರಾಜನ್ ಅಧ್ಯಕ್ಷರು ಕೇರಳ ಸಮಾಜ ಮಂಗಳೂರು ಕಾರ್ಯಕ್ರಮವನ್ನು ಉಧ್ಘಾಟಿಸಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಪ್ರಶಂಶಿಸಿದರು. ಪ್ರಾಂಶುಪಾಲಾರದ ಪ್ರೊ | ಕಸ್ತೂರಿ ಜೆ ಶೆಟ್ಟಿ ಉಪಸ್ಥಿತರಿದ್ದು ಹಬ್ಬದ ಆಚರಣೆಯ ಹಿಂದಿರುವ ನೈತಿಕ ಮೌಲ್ಯಗಳು ಹಾಗು ಮಹಾಬಲಿಯ ತ್ಯಾಗವನ್ನು ವಿದ್ಯಾರ್ಥಿಗಳು ಅಳವಡಿಸಬೇಕೆಂದು ಹೇಳಿದರು.

ಸಾರ ಹುದಾ ನಿರೂಪಿಸಿದರು. ಆರ್ಯ ಬಿ ಇವರ ಪ್ರಾರ್ಥನೆಯೊಂದಿಗೆ , ಪೂಜಾ ಸಿ ಎಸ್ ಸ್ವಾಗತಿಸಿ , ಭಾಗೀರಥಿ ನಾವಡ ಓಣಂ ಹಬ್ಬದ ಮಹತ್ವ ತಿಳಿಸಿದರು, ದಿವಿನ ವಂದಿಸಿದರು. ಕಾರ್ಯಕ್ರಮವು ಸುಂದರವಾದ ಹೂವಿನ ಅಲಂಕಾರ ಹಾಗೂ ಪ್ರಾಂಶುಪಾಲೆ, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನೊಳಗೊಂಡು ಚೆಂಡೆ ತಾಳದ ಜೊತೆ ವಿಜೃಂಭಣೆಯ ಮೆರವಣಿಗೆಯ ಮೂಲಕ ಮಹಾಬಲಿಯನ್ನು ಬರಮಾಡಿಕೊಳ್ಳಲಾಯಿತು. ವಿಭಾಗದ ಮಂತ್ರಿಮಂಡಲದ ಉಸ್ತುವಾರಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಹಲವು ಬಗೆಯನ್ನೊಳಗೊಂಡ ಓಣಂ ಸದ್ಯ ಸವಿಯುತ್ತ ನೃತ್ಯ,ಹಗ್ಗಜಗ್ಗಾಟ, ಮೊಸರು ಕುಡಿಕೆ ಹೀಗೆ ಹಲವು ಮನೋರಂಜನ ಆಟಗಳನ್ನು ಆಡುದರ ಜೊತೆಗೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ನೆರವೇರಿತು.