ಬಂಟ್ವಾಳ, 12 ನವೆಂಬರ್ 2025: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆ ನೆತ್ತರಕೆರೆ ಇಲ್ಲಿ ಜರುಗಿದ ತುಂಬೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಸ್ಪರ್ಧೆಯಲ್ಲಿ ನೆತ್ತರಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಪ್ರತಿಭಾ ಕಾರಂಜಿ ಸ್ಪರ್ಧೆಯ ಹಿರಿಯ ವಿಭಾಗದಲ್ಲಿ 9 ಹಾಗೂ ಕಿರಿಯ ವಿಭಾಗದಲ್ಲಿ 7 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಎರಡು ವಿಭಾಗದಲ್ಲಿಯೂ ಸಮಗ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ದಾಮೋದರ ನೆತ್ತರಕೆರೆ ಹಾಗೂ ಸದಸ್ಯರು, ಶಾಲಾ ಮುಖ್ಯ ಶಿಕ್ಷಕಿ ಸೆಲ್ವಿಯ ಬ್ರಿಗ್ಸ್ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.
ಸ್ಪರ್ಧಾ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳು:
ಪ್ರಥಮ ಸ್ಥಾನ: ಲಿಶಾನ್ ಎನ್ ಕೆ – ಇಂಗ್ಲಿಷ್ ಕಂಠ ಪಾಠ (ಹಿರಿಯ), ಸಿಂಚನ – ಭಕ್ತಿಗೀತೆ (ಹಿರಿಯ), ಹೃಷಿಕೇಶ್ – ಚಿತ್ರಕಲೆ (ಹಿರಿಯ), ಭುವನ್- ಕ್ಲೇ ಮಾಡಲಿಂಗ್ (ಹಿರಿಯ), ಪೂರ್ವಜ್ – ಮಿಮಿಕ್ರಿ (ಹಿರಿಯ), ಭುವಿಷ್ – ಚಿತ್ರಕಲೆ (ಕಿರಿಯ), ಹಿಮಾನಿ – ಛದ್ಮವೇಷ (ಕಿರಿಯ), ಭೂಮಿಕಾ ಆರ್ ಪೂಜಾರಿ – ದೇಶಭಕ್ತಿಗೀತೆ (ಕಿರಿಯ), ಆದ್ಯ ಎಸ್ – ಆಶುಭಾಷಣ (ಕಿರಿಯ).
ದ್ವಿತೀಯ ಸ್ಥಾನ: ಧೃತಿ ಕಬೇಲ – ಆಶುಭಾಷಣ (ಹಿರಿಯ), ಸಮರ್ಥ್ ಆಚಾರ್ಯ- ದೇಶಭಕ್ತಿಗೀತೆ (ಹಿರಿಯ), ಧೃತಿ ಕಬೇಲ – ಹಿಂದಿ ಕಂಠಪಾಠ (ಹಿರಿಯ), ಧೃತಿ ಡಿ ಆಚಾರ್ಯ- ಕನ್ನಡ ಕಂಠಪಾಠ, ಪ್ರಾರ್ಥನಾ ಪೂಜಾರಿ- ಕ್ಲೆ ಮಾಡಲಿಂಗ್ (ಕಿರಿಯ)
ತೃತೀಯ ಸ್ಥಾನ: ಸಿಂಚನ- ಕನ್ನಡ ಕವನ ವಾಚನ (ಹಿರಿಯ), ತೃತಿ- ಸಂಸ್ಕೃತ ಪಠಣ (ಕಿರಿಯ),