ಕಾರ್ಯಕ್ರಮವು ಆ.29 ರಂದು ನಡೆಯಿತು.ಪ್ರಸಿದ್ಧ ತುಳು ಚಲನಚಿತ್ರ ನಿರ್ದೇಶಕ, ನಟ ಶೋಧನ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ಸಾಲಿಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪಿಲಿಪಂಜಾ” ತುಳು ಶಾರ್ಟ್ ಫಿಲ್ಮ್‌ನ ನಾಯಕಿ ದಿಶಾ ರಾಣಿ ,ಶಾಲಾ ಉಪಾಧ್ಯಕ್ಷ ಜಗನ್ನಾಥ ಬಿ ಕೋಟ್ಯಾನ್,ಸಂಚಾಲಕ ಹರೀಂದ್ರ ಸುವರ್ಣ, ಕಾರ್ಯದರ್ಶಿ ಬಾಲಚಂದ್ರ ಸನಿಲ್, ಆಡಳಿತಾಧಿಕಾರಿ ಶ್ರೀಮತಿ ಮಂಜುಳಾ ಕೆ.ವಿ., ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗೀತಾ ಶೆಟ್ಟಿ , ಶಾಲಾ ಟ್ರಸ್ಟಿನ ಸದಸ್ಯರಾದ ಅವಿನಾಶ್, ಶ್ರೀಮತಿ ಪ್ರಜ್ಞಾ, ಯೋಗೀಶ್ ಕೋಟ್ಯಾನ್, ಹೇಮರಾಜ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಯತೀಶ್ ಅಮೀನ್ ಸ್ವಾಗತಿಸಿದರು.ಶ್ರೀಮತಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.ಶ್ರೀಮತಿ ಅನುಷಾ ವಂದಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ, ಸಂಗೀತ, ನಾಟಕ, ಚಿತ್ರಕಲೆ, ವಾದ–ವಿವಾದ ಮುಂತಾದ ವಿವಿಧ ವಿಭಾಗಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ತೀರ್ಪುಗಾರರಾಗಿ ವಿದುಷಿ ಶುಭ ಶೇಷಾದ್ರಿ, ವಿದುಷಿ ಮಂಗಳ ಕಿಶೋರ್ , ಸುಧಾಕರ್ ಎನ್. ಸುರತ್ಕಲ್ ಅವರು ಭಾಗವಹಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ರೂ. 3000, ದ್ವಿತೀಯ ಬಹುಮಾನ ರೂ. 2000 ಹಾಗೂ ತೃತೀಯ ಬಹುಮಾನ ರೂ. 1000 ನೀಡಿ ಗೌರವಿಸಲಾಯಿತು.