ಮೂಲ್ಕಿ, 9 ಆಗಸ್ಟ್ 2025: ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮೇರಾ ಯುವ ಭಾರತ್, ಮೈ ಭಾರತ್ ದ.ಕ ಜಿಲ್ಲೆ, ರಾಷ್ಟ್ರೀಯ ಸೇವಾ ಯೋಜನಾ ಘಟಕ ವಿಜಯ ಕಾಲೇಜು ಮೂಲ್ಕಿ, ಮತ್ತು ಜಿಲ್ಲಾ,ರಾಜ್ಯ, ದ.ಕ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ.) ತೋಕೂರು, ಹಳೆಯಂಗಡಿ, ಇವರುಗಳ ಸಯುಂಕ್ತ ಆಶ್ರಯದಲ್ಲಿ ಏಕ್ ಪೇಡ್ ಮಾ ಕೆ ನಾಮ್ ಅಭಿಯಾನ 2025-26 ಮೂಲ್ಕಿ ವಿಜಯ ಕಾಲೇಜು ಇದರ ಸಭಾಂಗಣದಲ್ಲಿ ಜರುಗಿತು.
ವಿದ್ಯಾರ್ಥಿನಿ ಕುಮಾರಿ ಶ್ರೇಯಾ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶ್ರೀಮತಿ ಶರ್ಮಿಳಾ ರಾಜೇಶ್, ಸಹ ಯೋಜನಾಧಿಕಾರಿ ರಾ.ಸೆ. ಯೋ ಘಟಕ ವಿಜಯ ಕಾಲೇಜು ಮೂಲ್ಕಿ ಅತಿಥಿಗಣ್ಯರನ್ನು ಹಾಗೂ ನೆರೆದಿದ್ದವರನ್ನು ಸ್ವಾಗತಿಸಿದರು. ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಉಮಾನಾಥ್ ಕೋಟ್ಯಾನ್ ಅಥಿತಿ ಗಣ್ಯರೊಂದಿಗೆ ದೀಪ ಬೆಳಗಿಸಿ ಮತ್ತು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯುವಜನತೆ ಕೇವಲ ಪುಸ್ತಕದ ಬದನೆಕಾಯಿ ಎನಿಸದೆ, ನೈಜ ಸಂಗತಿಗಳ ಜ್ಞಾನವುಳ್ಳವರು ಆಗಿರಬೇಕು, ಸುತ್ತಲಿನ ಪರಿಸರದ ಬಗ್ಗೆ ಕಾಳಜಿ ಹೊಂದಿರಬೇಕು ಎಂದರು.
ಮುಖ್ಯ ಅತಿಥಿಗಳಾದ ಶ್ರೀ ಉಲ್ಲಾಸ್ ಕೆ.ಟಿ.ಕೆ, ಯುವ ಅಧಿಕಾರಿ ಮೈ ಭಾರತ್ ದ.ಕ ಜಿಲ್ಲೆ ಮಾತನಾಡಿ ಯುವಶಕ್ತಿ ಎಚ್ಚೆತ್ತುಕೊಂಡರೆ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಪರಿಸರದ ಕೊಡುಗೆ ನೀಡಬಹುದು ಎಂದರು. ಮೂಲ್ಕಿ ನಗರ ಪಂಚಾಯತ್ ನ ಅಧ್ಯಕ್ಷರಾದ ಶ್ರೀ ಸತೀಶ್ ಅಂಚನ್ ಮಾತನಾಡಿ ವಿದ್ಯಾಭ್ಯಾಸದ ಜೊತೆಗೆ ಪರಿಸರ ಸಂರಕ್ಷಣೆಯು ಕೂಡ ಇಂದಿನ ವಿಧ್ಯಾರ್ಥಿಗಳ ಧ್ಯೇಯವಾಗಿರಬೇಕು ಎಂದು ಕರೆ ನೀಡಿದರು. ಮೂಲ್ಕಿ ನಗರ ಪಂಚಾಯತ್ ನ ಮಾಜಿ ಅಧ್ಯಕ್ಷರು ಶ್ರೀ ಸುನಿಲ್ ಆಳ್ವ ಅವರು ಮಾತನಾಡಿ ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಜಗತ್ತಿನಲ್ಲಿ ಪ್ರತಿ ಓರ್ವ ಮನುಷ್ಯ, ಪ್ರಾಣಿ ಪಕ್ಷಿ ಸಂಕುಲಗಳು ಬಾಳಿ ಬದುಕಲು ಹಸಿರು ಪರಿಸರ ಅಗತ್ಯತೆ ಇದೆ. ನಿರಂತರವಾಗಿ ಗಿಡ ನೆಟ್ಟು, ನೀರೆರೆದು ಪೋಷಿಸುವ ಮೂಲಕ ವಿಧ್ಯಾರ್ಥಿಗಳಿಗೆ ಪರಿಸರದ ಜಾಗೃತಿ ಮೂಡಿಸಬೇಕು. ಯಾಕೆಂದರೆ ಪರಿಸರವಿಲ್ಲದೆ ನಮ್ಮ ಜೀವ ನಗಣ್ಯ ಎಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಬೇಕು ಎಂದರು.
ಶ್ರೀಮತಿ ಕುಸುಮಾ ಚಂದ್ರಶೇಖರ್, ಅಧ್ಯಕ್ಷರು ಗ್ರಾಮ ಪಂಚಾಯತ್ ಪಡುಪಣಂಬೂರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕಾರೈಸಿದರು. ಶ್ರೀ ಜಗದೀಶ್. ಕೆ, ಆಡಳಿತಾಧಿಕಾರಿ ಮೈ ಭಾರತ್ ದ. ಕ. ಜಿಲ್ಲೆ ಇವರು ಮಾತನಾಡಿ ಸಂಘ ಸಂಸ್ಥೆಗಳು ಇಂತಹ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ವಿದ್ಯಾರ್ಥಿಗಳಲ್ಲಿ ಪ್ರಕೃತಿಯ ಕುರಿತು ಆಸಕ್ತಿ ಮೂಡಿಸಲು ಸಹಕಾರಿಯಾಗುತ್ತದೆ ಎಂದರು. ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ.) ತೋಕೂರು, ಹಳೆಯಂಗಡಿ ಇದರ ಸದಸ್ಯ ಶ್ರೀ ಸಂಪತ್ ದೇವಾಡಿಗ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಲ| ಪುಷ್ಪರಾಜ್ ಚೌಟ, ಉಪಾಧ್ಯಕ್ಷರು, ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪಯರ್ ವಿಧ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಾ ‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನವು 2024 ರ ವಿಶ್ವ ಪರಿಸರ ದಿನದಂದು ನವದೆಹಲಿಯ ಬುದ್ಧ ಜಯಂತಿ ಉದ್ಯಾನವನದಲ್ಲಿ ಅರಳಿ ಮರದ ಸಸಿಯನ್ನು ನೆಡುವ ಮೂಲಕ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರಾರಂಭಿಸಿದ ಅಭಿಯಾನವಾಗಿದೆ ಜನರು ತಮ್ಮ ಸ್ವಂತ ತಾಯಿಯ ಮೇಲಿನ ಪ್ರೀತಿ ಮತ್ತು ಗೌರವದ ಸಂಕೇತವಾಗಿ ಗಿಡವನ್ನು ನೆಡಲು ಮತ್ತು ಭೂಮಿ ತಾಯಿಯ ರಕ್ಷಣೆಗಾಗಿ ಪ್ರತಿಜ್ಞೆ ತೆಗೆದುಕೊಳ್ಳುವ ಮಹತ್ವದ ಬಗ್ಗೆ ವಿವರಿಸಿದರು. ಈ ಅಭಿಯಾನವು ವಿಶೇಷವಾಗಿ ಯುವಜನತೆಯಲ್ಲಿ, ತಮ್ಮ ತಾಯಿಯ ಹೆಸರಿನಲ್ಲಿ ಸಸಿಗಳನ್ನು ನೆಡಲು ಪ್ರೇರೇಪಿಸುವ ಗುರಿಯನ್ನು ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮೂಲ್ಕಿ, ವಿಜಯ ಪದವಿ ಪೂರ್ವ ಕಾಲೇಜು, ಇದರ ಪ್ರಾಂಶುಪಾಲರಾದ ಪ್ರೊ. ಅರುಣ್ ಕುಮಾರ್ ತಮ್ಮೆರಡು ಹಿತನುಡಿಗಳಲ್ಲಿ ರಾಜಕೀಯ ನಾಯಕರು ಹಾಗೂ ಸಂಘ ಸಂಸ್ಥೆಗಳು ಒಗ್ಗೂಡಿ ವಿದ್ಯಾರ್ಥಿಗಳಲ್ಲಿ ಇಂತಹ ಪರಿಸರ ಕಾಳಜಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಉತ್ತಮ ವಿಚಾರ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ವೆಂಕಟೇಶ್ ಭಟ್ ಪ್ರಾಂಶುಪಾಲರು ವಿಜಯ ಕಾಲೇಜು, ಮೂಲ್ಕಿ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ತಾಯಿ ಮಕ್ಕಳನ್ನು ಸಲಹಿ ಪೋಷಿಸುವಂತೆಯೇ ಗಿಡ ಮರಗಳು ಭೂಮಿಯ ಸಮಸ್ತ ಜೀವಗಳಿಗೆ ಗಾಳಿ, ನೆರಳು ನೀಡಿ ರಕ್ಷಣೆ ನೀಡುತ್ತದೆ ಆದ್ದರಿಂದ ಇಂತಹ ಕಾರ್ಯಕ್ರಮ ಯುವಜನತೆಯಲ್ಲಿ ಜಾಗೃತಿ ಮೂಡಿಸಲು ಬಹಳ ಅಗತ್ಯ ಎಂದರು.
ವೇದಿಕೆಯಲ್ಲಿ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ.) ತೋಕೂರು, ಹಳೆಯಂಗಡಿ ಇದರ ಗೌರವಾಧ್ಯಕ್ಷರು ಶ್ರೀ ಯೋಗೀಶ್ ಕೋಟ್ಯಾನ್, ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ, ಮಹಿಳಾ ಕಾರ್ಯದರ್ಶಿ ಶ್ರೀಮತಿ ಶೈಲಾ ಶೆಟ್ಟಿಗಾರ್ ಉಪಸ್ತಿತರಿದ್ದರು. ಅತಿಥಿಗಳಿಗೆ ನೆನಪಿನ ಕಾಣಿಕೆ ಹಾಗೂ ಗಿಡಗಳನ್ನು ವಿತರಿಸಲಾಯಿತು. ಸುಮಾರು 60 ಸಸಿಗಳನ್ನು ಎಲ್ಲರಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ನೀಮಾ ಸನಿಲ್, ತಂಡದ ಉಪ ನಾಯಕ ಶ್ರೀ ಸಚಿನ್ ಆಚಾರ್ಯ, ಸಂಸ್ಥೆಯ ಹಿತೈಷಿ ಶ್ರೀ ಸುಧೀರ್ ಬಾಳಿಗ ಅವರು ಉಪಸ್ಥಿತರಿದ್ದರು. ಮೂಲ್ಕಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ವಿಜಯ ಕಾಲೇಜು ಇದರ ಯೋಜನಾ ಅಧಿಕಾರಿ ಅರುಣ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಸಂತೋಷ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.