ಎಡಪದವು, ಸಪ್ಟೆಂಬರ್ 8, 2024 : ದಕ್ಷಿಣ ಕನ್ನಡ ಜಿಲ್ಲಾ ನೆಟ್ ಬಾಲ್ ಸಂಸ್ಥೆ ಹಾಗೂ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಎಡಪದವು ಇದರ ಜಂಟಿ ಆಶ್ರಯದಲ್ಲಿ ಮಟ್ಟದ ಮಿಕ್ಸೆಡ್ ನೆಟ್ ಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರೇಮನಾಥ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು ಹಾಗೂ ನವೀನ್ ಹೆಗ್ಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಸುದೀನ್ ಮತ್ತು ನಿತಿನ್ ಉಪಸ್ಥಿತರಿದ್ದರು. ತುಷಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು.

ಈ ಪಂದ್ಯಾಟದಲ್ಲಿ 9 ತಂಡಗಳು ಭಾಗವಹಿಸಿದ್ದು, ಇದರಲ್ಲಿ ಎಸ್ ಡಿ ಎಮ್ ಕಾಲೇಜು ಉಜಿರೆ ಚಾಂಪಿಯನ್ ಪಟ್ಟವನ್ನು ಅಲಂಕಾರಿಸಿತು. ದ್ವಿತೀಯ ಸ್ಥಾನವನ್ನು ಏನಾಪೋಯ ಕಾಲೇಜು ಮಂಗಳೂರು ಪಡೆದುಕೊಂಡಿತು.
ಪಂದ್ಯಕೂಟದ ಉತ್ತಮ ಶೂಟರ್ ಆಗಿ ಮೇಘನಾ ಬಿ ಸಿ ಪಡೆದುಕೊಂಡರು ಹಾಗೂ ಉತ್ತಮ ಡಿಫೆಂಡರ್ ಆಗಿ ಚಿಂತನ್ ಬಿ ಸಿ ಪಡೆದುಕೊಂಡರೆ, ಸುಪ್ರೀತ್ ಉತ್ತಮ ಆಲ್ ರೌಂಡರ್ ಆಗಿ ಹೊರಹೋಮ್ಮಿದರು. ಬಹುಮಾನವನ್ನು ಸ್ವಾಮಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾದ ಗಾಯತ್ರಿ ಅವರು ವಿತರಿಸಿದರು ಹಾಗೂ ಪ್ರೇಮನಾಥ್ ಶೆಟ್ಟಿ, ನವೀನ್ ಹೆಗ್ಗಡೆ ಮತ್ತು ಸುದೀನ್ ಉಪಸ್ಥಿತರಿದ್ದರು