ಕಕ್ಯಪದವು, 21 ಜೂನ್ 2025: ಎಲ್. ಸಿ. ಆರ್. ವಿದ್ಯಾ ಸಂಸ್ಥೆ ವಿಶ್ವ ಯೋಗ ದಿನಾಚರಣೆ ” ಒಂದೇ ಭೂಮಿ ಒಂದೇ ಆರೋಗ್ಯ” ಎಂಬ ಘೋಷ ವಾಕ್ಯದೊಂದಿಗೆ ಸಂಸ್ಥೆಯಲ್ಲಿ ‘ಅಂತರಾಷ್ಟ್ರೀಯ ಯೋಗ ದಿನಾಚರಣೆ’ಯನ್ನು ಜೂನ್ 21ರಂದು ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲ ಜೋಸ್ಟನ್ ಲೋಬೋ, ಸಂಯೋಜಕ ಯಶವಂತ್ ಜಿ.ನಾಯಕ್, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ದೈಹಿಕ ಶಿಕ್ಷಣ ಶಿಕ್ಷಕಿ ಹರಿಣಾಕ್ಷಿ ಜಿ ಕೆ ಪ್ರಾಸ್ತಾವಿಕ ನುಡಿಗಳೊಂದಿಗೆ “ಮಾಡಿದರೆ ಯೋಗ, ದೂರವಾಗುವುದು ರೋಗ” ಎಂಬ ಮಹತ್ವಪೂರ್ಣ ಮಾತಿನಂತೆ ಉತ್ತಮ ಆರೋಗ್ಯ, ಏಕಾಗ್ರತೆ ಹಾಗೂ ಸಮಚಿತ್ತಕ್ಕಾಗಿ ‘ಯೋಗ’ ಒಂದು ದಿವ್ಯೌಷಧ. ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತರಾಗಿರಿ ಎಂದು ಕಿವಿಮಾತನ್ನು ಹೇಳುತ್ತ ವಿದ್ಯಾರ್ಥಿಗಳಿಗೆ ಯೋಗಾಸನದ ಅರಿವನ್ನು ಮೂಡಿಸಿದರು.

ತದನಂತರ ತರಗತಿವಾರು ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಯೋಗಗಳನ್ನು ಮಾಡಿಸಿದರು. ಯೋಗಾಭ್ಯಾಸದ ಮೂಲಕ ದೈಹಿಕ ಮತ್ತು ಮಾನಸಿಕ ಸದೃಢತೆಯ ಗಮನಾರ್ಹ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಈ ದಿನವನ್ನು ಮೀಸಲಿಡಲಾಗಿತ್ತು. ಗಮನಾರ್ಹವಾಗಿ, ಶಿಕ್ಷಕರು ವಿವಿಧ ಯೋಗ ಭಂಗಿಗಳನ್ನು ಪ್ರದರ್ಶಿಸುವಲ್ಲಿ ವಿದ್ಯಾರ್ಥಿಗಳೊಂದಿಗೆ ಉತ್ಸಾಹದಿಂದ ಸೇರಿಕೊಂಡರು. ಸಾಮರಸ್ಯ ಮತ್ತು ಫಲಪ್ರದ ವಾತಾವರಣವನ್ನು ಸೃಷ್ಟಿಸಿದರು. ಅಂತರರಾಷ್ಟ್ರೀಯ ಯೋಗ ದಿನವನ್ನು ಸಂತೋಷದಿಂದ ಆಚರಿಸುತ್ತಿದ್ದಂತೆ ಶಾಲಾ ಕ್ಯಾಂಪಸ್ ಚೈತನ್ಯದಿಂದ ತುಂಬಿತ್ತು.
ಸಂಸ್ಥೆಯ ಸಹ ಶಿಕ್ಷಕಿ ಸೌಮ್ಯ ಬಿ. ಆರ್. ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಪ್ರಾಂಶುಪಾಲ ಜೋಸ್ಟನ್ ಲೋಬೋ, ಸಂಯೋಜಕ ಯಶವಂತ್ ಜಿ.ನಾಯಕ್, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಕು.ವಿಜಯ ಹಾಗೂ ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದರು.ಸಂಸ್ಥೆಯ ಬೋಧಕ ಸಿಬ್ಬಂದಿ ವರ್ಗದರೆಲ್ಲರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.