ಕಕ್ಯಪದವು, 25 ಆಗಸ್ಟ್ 2025: ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ) ನಡೆಸುತ್ತಿರುವ ಎಲ್ ಸಿ ಆರ್ ಇಂಡಿಯನ್ ಪದವಿ ಕಾಲೇಜಿನ ಬಿ.ಕಾಂ ವಿಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ಕುರಿತು ರಾಕೇಶ್ ಕೆ ಎನ್ ರವರು ಕಾರ್ಯಗಾರ ನಡೆಸಿದರು.
ಈ ಕಾರ್ಯಗಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪರಿಣಾಮಕಾರಿಯಾಗಿ ಓದುವ ವಿಧಾನಗಳು, ಸಮಯ ನಿರ್ವಹಣೆ, ಪ್ರಶ್ನಾಪತ್ರಿಕೆ ಪರಿಹಾರ ತಂತ್ರಗಳು ಮತ್ತು ನೈತಿಕ ಮೌಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಈ ಕಾರ್ಯಾಗಾರದಲ್ಲಿಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೋ,ಸಂಯೋಜಕರಾದ ಯಶವಂತ ಜಿ ನಾಯಕ್, ಉಪನ್ಯಾಸಕರು ಉಪಸ್ಥಿತಿಯಲ್ಲಿದ್ದರು.