ಕಕ್ಯಪದವು, 20 ಸೆಪ್ಟೆಂಬರ್ 2025: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ ಹಾಗೂ ಎಲ್ ಸಿ ಆರ್ ಇಂಡಿಯನ್ ವಿದ್ಯಾ ಸಂಸ್ಥೆಗಳು ಕಕ್ಯಪದವು, ಇವರ ಸಹಯೋಗದೊಂದಿಗೆ 17 ರ ವಯೋಮಾನ ವಿಭಾಗದ ಬಾಲಕ ಬಾಲಕಿಯರ ಬಂಟ್ವಾಳ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಕೂಟವು ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು.
ಸಂಸ್ಥೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯರು ಪ್ರಾರ್ಥನೆಯ ಮೂಲಕ ಕಾರ್ಯಕ್ರಮವನ್ನು ಆರಂಭಿಸಿ ಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯ ಕೆ ಇವರು ಆಗಮಿಸಿದ ಎಲ್ಲಾ ಗಣ್ಯರಿಗೂ ಹಾಗೂ ಕ್ರೀಡಾಪಟುಗಳಿಗೂ ಸ್ವಾಗತವನ್ನು ನೀಡಿದರು. ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀಮತಿ ಶಿವಾನಿ ಆರ್ ನಾಥ್ ಇವರು ಬಂದಂತಹ ಎಲ್ಲಾ ಗಣ್ಯರಿಗೂ ಪ್ರೀತಿಯ ದ್ಯೋತಕವಾಗಿ ಹೂಗುಚ್ಚ ನೀಡಿ ಗೌರವಿಸಿದರು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಸಂಸ್ಥೆಯ ಸಂಚಾಲಕರಾದ ಬಬಿತಾ ಆರ್ ನಾಥ್ ಹಾಗೂ ತಾಲೂಕು ದೈಹಿಕ ಶಿಕ್ಷಣ ಪರೀವೀಕ್ಷಣಾಧಿಕಾರಿಗಳಾದ ಶ್ರೀಮತಿ ಆಶಾ ನಾಯಕ್ ಇವರು ನೆರವೇರಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಸಂಯೋಜಕರಾದ ಶ್ರೀ ಯಶವಂತ್ ಜಿ ನಾಯಕ್, ಉಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೇವತಿ ಮುದಲಾಡಿ, ರಾಜ್ಯ ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳು,ಅಧ್ಯಕ್ಷರು, ಉಪಾಧ್ಯಕ್ಷರುಗಳಾದ ಶ್ರೀ ಅಖಿಲ್ ಶೆಟ್ಟಿ, ಶ್ರೀ ನವೀನ್ ಪಿ ಎಸ್, ಶ್ರೀ ಚಿನ್ನಪ್ಪ ,ಶ್ರೀ ಶಿವಪ್ರಸಾದ್ ರೈ ಮುಂತಾದವರು ಉಪಸ್ಥಿತರಿದ್ದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ಶ್ರೀಮತಿ ಆಶಾ ನಾಯಕ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸಂಸ್ಥೆಯ ಶ್ರೇಯೋಭಿವೃದ್ಧಿಯನ್ನು ಶ್ಲಾಘಿಸಿ ಕ್ರೀಡಾಪಟುಗಳಿಗೆ ಶಿಸ್ತು, ಸಂಯಮದ ಬಗ್ಗೆ ತಿಳಿ ಹೇಳಿ ಶುಭ ಹಾರೈಸಿದರು. ತದನಂತರ ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ ನೆರೆದಿದ್ದ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿ, ಸಂಸ್ಥೆಯ ಆಗುಹೋಗುಗಳ ಬಗ್ಗೆ ಹಾಗೂ ಸಂಘಟನಾ ಶಕ್ತಿಯ ಬಗ್ಗೆ ಮಾತನಾಡಿ ಸಂಸ್ಥೆಯ ಸಾಧನೆಗಳನ್ನು ತಿಳಿಸಿದರು.
ತದನಂತರ ಕ್ರೀಡಾ ಸ್ಪೂರ್ತಿಯ ಚಿಲುಮೆಯಾದ ಕ್ರೀಡಾ ಪ್ರಶಸ್ತಿಗಳ ಅನಾವರಣವನ್ನು ಮಾಡಿದ ಸಂಸ್ಥೆಯ ಟ್ರಸ್ಟಿ ಆಗಿರುವ ಶ್ರೀ ಯಜ್ಞೇಶ್ ರಾಜ್ ಅವರು ಕಾರ್ಯಕ್ರಮದ ಅಧ್ಯಕ್ಷೀಯ ನೆಲೆಯಲ್ಲಿ ಕ್ರೀಡಾಪಟುಗಳಿಗೆ ಪ್ರೋತ್ಸಾಹದ ಮಾತುಗಳನ್ನಾಡಿ ಶುಭ ಹಾರೈಸಿದರು.
ಈ ಪಂದ್ಯಾಕೂಟದ ಪ್ರಥಮ ಹಾಗೂ ದ್ವಿತೀಯ ಸ್ಥಾನದ ಟ್ರೋಫಿಯನ್ನು ಕೊಡುಗೆಯಾಗಿ ನೀಡಿದ ಸಂಸ್ಥೆಯ ಕರಾಟೆ ತರಬೇತುದಾರರಾದ ಶ್ರೀ ಅಶೋಕ ಆಚಾರ್ಯ ಇವರನ್ನು ಸಂಸ್ಥೆಯ ಸಂಚಾಲಕರು ಸ್ಮರಣಿಕೆ ನೀಡಿ ಗೌರವಿಸಿದರು. ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿಯವರಾದ ಶ್ರೀಮತಿ ಹರಿಣಾಕ್ಷಿ ಜಿ ಕೆ ಹಾಗೂ ಶ್ರದ್ಧಾ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆಯಲ್ಲಿದ್ದ ಎಲ್ಲ ಗಣ್ಯರಿಗೂ ಸಂಚಾಲಕರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ವಿದ್ಯಾ ಸಂಸ್ಥೆಯ ಸಹಶಿಕ್ಷಕಿಯವರಾದ ಸೌಮ್ಯ ಬಿ. ಆರ್,ಕುಶಲ ಹಾಗೂ ದಿವ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿ ಹರಿಣಾಕ್ಷಿ ಜಿ ಕೆ ವಂದಿಸಿದರು.
ಬಿಸಿಲು ಮಳೆಯೊಂದಿಗೆ ಈ ತ್ರೋಬಾಲ್ ಪಂದ್ಯಾಕೂಟ ಎಲ್ ಸಿ ಆರ್ ಕ್ರೀಡಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ತಾಲೂಕಿನ ಒಟ್ಟು ಒಂಬತ್ತು ಶಾಲೆಗಳು ಈ ಪಂದ್ಯಕೂಟದಲ್ಲಿ ಭಾಗವಹಿಸಿದ್ದು ಭಾಗವಹಿಸಿದ ಎಲ್ಲಾ ತಂಡಗಳು ಅತ್ಯಂತ ರೋಚಕ ಪ್ರದರ್ಶನವನ್ನು ನೀಡಿದವು.
ಸಮಾರೋಪ ಸಮಾರಂಭ ದ ಮೂಲಕ ಪ್ರಶಸ್ತಿ ವಿತರಣೆಯನ್ನು ಮಾಡಲಾಯಿತು.
ಬಾಲಕಿಯರ ವಿಭಾಗದಲ್ಲಿ ಮಂಚಿ ವಲಯವನ್ನು ಪ್ರತಿನಿಧಿಸಿದ ಸರಕಾರಿ ಪ್ರೌಢಶಾಲೆ ಸಜೀಪಮೂಡ ದ್ವಿತೀಯ ಸ್ಥಾನವನ್ನು ಗಳಿಸಿತು.ಬಾಲಕರ ವಿಭಾಗದಲ್ಲಿ ಕಲ್ಲಡ್ಕ ವಲಯವನ್ನು ಪ್ರತಿನಿಧಿಸಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ದ್ವಿತೀಯ ಸ್ಥಾನವನ್ನು ಪಡೆಯಿತು . ವಾಮದಪದವು ವಲಯವನ್ನು ಪ್ರತಿನಿಧಿಸಿದ ಅತಿಥೇಯ ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಬಾಲಕ ಹಾಗೂ ಬಾಲಕಿಯರ ಇತ್ತಂಡಗಳು ಪ್ರಥಮ ಸ್ಥಾನ ಚಾಂಪಿಯನ್ ಟ್ರೋಫಿಯನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದವು.
ಬೆಸ್ಟ್ ಸರ್ವರ್ ಮನಸ್ವಿನಿ ಎಲ್ ಸಿ ಆರ್ ಹಾಗೂ ಶೋಧನ್ ಎಲ್ ಸಿ ಆರ್,ಬೆಸ್ಟ್ ಡಿಫೆಂಡರ್ ಪೂಜಾ ಸಜೀಪ ಹಾಗೂ ಮಹಮ್ಮದ್ ಸಾಹಲ್ ಮಾಣಿ,ಬೆಸ್ಟ್ ಆಲ್ ರೌಂಡರ್ ಸಾನ್ವಿತ್ ಹಾಗೂ ಜೇಶ್ಮ್ಮಾ ಎಲ್ ಸಿ ಆರ್ ಇವರು ಆಯ್ಕೆಯಾದರು.
ಎಲ್ ಸಿ ಆರ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ,ಪ್ರಾಂಶುಪಾಲರು, ಸಂಯೋಜಕರು, ಮುಖ್ಯ ಶಿಕ್ಷಕಿ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಗೆಲುವಿನ ರೂವಾರಿಗಳಿಗೆ ಅಭಿನಂದನೆ ಸಲ್ಲಿಸಿದರು.