ಸಜೀಪಮುನ್ನೂರು, ಸಪ್ಟೆಂಬರ್ 12, 2024 : ಕರ್ನಾಟಕ ಸರಕಾರ ಕ್ಷೇತ್ರ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಇವರ ಸಹಯೋಗದಲ್ಲಿ ಸೆಪ್ಟೆಂಬರ್ 12ರಂದು ಸ. ಹಿ. ಪ್ರಾ. ಶಾಲೆ. ಸಜೀಪಮುನ್ನೂರಿನಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟವು ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಹಿರಿಯ ಪ್ರಾಥಮಿಕ ವಿಭಾಗದ ಬಾಲಕಿಯರ ತಂಡವು ಪ್ರಥಮ ಸ್ಥಾನವನ್ನು ಪಡೆದು , ಈ ತಂಡದಲ್ಲಿ ಏಳನೇ ತರಗತಿಯ ಹನ್ಸುಜ, ಆಧ್ಯಾ ಜಿ.ಕೆ ,ಧನ್ವಿತ ,ಹಂಶಿಕ , ಜಸ್ವಿ ಆರ್ ಎಸ್, ಅಪೇಕ್ಷಾ, ವೇಣಿಧ್ಯ, ತನುಷ ಡಿ ಬಿ, ನಿಧಿ ಪಿ, ಪ್ರಣಮ್ಯ ಪಿ ದೇವಾಡಿಗ ಹಾಗೂ ಆರನೇ ತರಗತಿಯ ಅಪರ್ಣಾ ಎ ಶೆಟ್ಟಿ, ಸಮೀಕ್ಷಾ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಶಾಲಾ ದೈಹಿಕ ಶಿಕ್ಷಕಿಯಾದ ಹರಿಣಾಕ್ಷಿ ಜಿ ಕೆ ಮತ್ತು ಶ್ರದ್ಧಾ ಇವರ ನೇತೃತ್ವದಲ್ಲಿ ಈ ವಿದ್ಯಾರ್ಥಿಗಳು ತರಬೇತಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು , ಸಂಯೋಜಕರು ,ಮುಖ್ಯ ಶಿಕ್ಷಕಿ ಹಾಗೂ ಬೋಧಕ ಮತ್ತು ಬೋಧಕೇತರ ವೃಂದ ಅಭಿನಂದಿಸಿದರು.