ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ) ನಡೆಸುತ್ತಿರುವ ಎಲ್ ಸಿ ಆರ್ ಇಂಡಿಯನ್ ಪದವಿ ಕಾಲೇಜಿನ ಬಿ.ಕಾಂ ವಿಭಾಗದ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕಾರ್ಡ್ ಬಳಕೆಯ ಕುರಿತು ದಿನಾಂಕ 08 ಆಗಸ್ಟ್ 2025 ರಂದು ಉಪನ್ಯಾಸಕರುಗಳಾದ ರೂಪಾಕ್ಷಿ ಮತ್ತು ಚೈತ್ರ ರವರು ಕಾರ್ಯಗಾರ ನಡೆಸಿದರು.
ಈ ಕಾರ್ಯಗಾರದಲ್ಲಿ ಸ್ಮಾರ್ಟ್ ಕಾರ್ಡುಗಳ ಸುರಕ್ಷಿತ ಬಳಕೆ ಮತ್ತು ಡೇಟಾ ಸಂಗ್ರಹಣೆ, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಡಿಜಿಟಲ್ ಯುಗದಲ್ಲಿ ಆಗುವಂತಹ ಪ್ರಯೋಜನಗಳು, ಆನ್ಲೈನ್ ವಹಿವಾಟು ಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈ ಕಾರ್ಯಾಗಾರದಲ್ಲಿ ಸಂಸ್ಥೆಯ ಸಂಯೋಜಕರಾದ ಯಶವಂತ ಜಿ ನಾಯಕ್, ಪದವಿ ವಿಭಾಗದ ಮುಖ್ಯಸ್ಥರಾದ ದೀಕ್ಷಿತಾ, ಹಾಗೂ ಉಪನ್ಯಾಸಕರು ಉಪಸ್ಥಿತಿಯಲ್ಲಿದ್ದರು.